ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಉಡುಪಿ, ಜು.12: ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಜಮೀನಿನಲ್ಲಿ 2012ರ ಜನವರಿ ಪೂರ್ವದಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ಕರ್ನಾಟಕ ಭೂಕಂದಾಯ ಕಾಯಿದೆಯ ಅಡಿಯಲ್ಲಿ ಸಕ್ರಮ ಗೊಳಿಸುವ ಸಲುವಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಸೆ.11 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಅಲ್ಲದೆ ನಗರಪ್ರದೇಶ ಅಂದರೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿ ಮತ್ತು ಪಟ್ಟಣ ಪ್ರದೇಶದಿಂದ ನಿರ್ದಿಷ್ಟ ಪಡಿಸಿದ ಅಂತರ ದೊಳಗಿನ ಗ್ರಾಮಗಳ ಸರಕಾರಿ ಜಮೀನಿನಲ್ಲಿ 2012ರ ಜನವರಿ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಿಸಿದ ವಾಸದ ಮನೆಗಳನ್ನು ಸಹ ಭೂಕಂದಾಯ ಕಾಯ್ದೆ 1964ರ 94 (ಸಿ)(ಸಿ) ಅಡಿ ಸಕ್ರಮಗೊಳಿಸಲು ಕೋರಿ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ಸಹ ಸರಕಾರ ಸೆ.11ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
Next Story





