ಎಸಿ ಘಟಕ ವಿಫಲ: ಇಂಡಿಗೋ ವಿಮಾನ ಸಂಚಾರ ರದ್ದು

ಪಾಟ್ನಾ, ಜು. 12: ಎಸಿ ಘಟಕ ವಿಫಲವಾದ ಹಿನ್ನೆಲೆಯಲ್ಲಿ ಗುರುವಾರ ಕೋಲ್ಕತ್ತಾಕ್ಕೆ ತೆರಳಲಿದ್ದ ಇಂಡಿಗೋ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ವಿಮಾನದಲ್ಲಿ 178 ಪ್ರಯಾಣಿಕರು ಇದ್ದರು. ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಪಾಟ್ನಾದ ಜಯಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿಲುಗೆ ಸ್ಥಳದಲ್ಲಿ ವಿಮಾನವನ್ನು ಮತ್ತೆ ನಿಲ್ಲಿಸಿದ ಬಳಿಕ ಪ್ರಯಾಣಿಕರು ಇಳಿದರು. ವಿಮಾನವನ್ನು ನಿಲ್ಲಿಸಿದ ಬಳಿಕ ಹೊಸದಿಲ್ಲಿಯಲ್ಲಿರುವ ಇಂಡಿಗೋ ವಿಮಾನದ ಕೇಂದ್ರಕಚೇರಿಯಿಂದ ಎಂಜಿನಿಯರ್‌ಗಳಿಗೆ ಕರೆ ಹೋಯಿತು.
ವಿಮಾನದ ಕ್ಯಾಬೀನ್‌ನಲ್ಲಿದ್ದ ಒಂದು ಎಸಿ ಘಟಕ ವಿಫಲವಾಯಿತು. ಎಟಿಸಿ ಯಿಂದ ಹಾರಾಟಕ್ಕೆ ಅನುಮತಿ ದೊರೆಕಿದ ಬಳಿಕ ವಿಮಾನ ರನ್‌ವೇಯಲ್ಲಿ ಇದ್ದಾಗ ಫೈಲೆಟ್‌ಗೆ ಇದು ಅರಿವಿಗೆ ಬಂತು ಎಂದು ವಿಮಾನ ನಿಲ್ದಾಮದ ಮೂಲಗಳು ತಿಳಿಸಿವೆ.
Next Story





