ಬಿಬಿಎಂಪಿ ಆಯುಕ್ತ, ಕಂದಾಯ ಸಹಾಯಕ ಅಧಿಕಾರಿ ಖುದ್ದು ಹಾಜರಿಗೆ ಹೈಕೋರ್ಟ್ ಆದೇಶ
ಖಾಸಗಿ ಶಾಲೆಗೆ ಹೆಚ್ಚುವರಿ ಕಂದಾಯ ವಿಚಾರ

ಬೆಂಗಳೂರು, ಜು.12: ಖಾಸಗಿ ಶಾಲೆಯವರು ಶಿಕ್ಷಣ ಹೊರತುಪಡಿಸಿ ಇತರೆ ಚಟುವಟಿಕೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಶಾಲೆಗೆ ಇತರೆ ಚಟುವಟಿಕೆಯ ಕಂದಾಯ ಕಟ್ಟಲು ಆದೇಶಿಸಿದ್ದರಿಂದ ಹೈಕೋರ್ಟ್, ಬಿಬಿಎಂಪಿ ಆಯುಕ್ತ ಹಾಗೂ ಕಂದಾಯ ಸಹಾಯಕ ಅಧಿಕಾರಿಗೆ ಗುರುವಾರ ಕೋರ್ಟ್‌ಗೆ ಖುದ್ಧು ಹಾಜರಾಗಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಆರ್.ಎ.ದೇವಾನಂದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಅರಕೆರೆಯಲ್ಲಿರುವ ಅರ್ದಾನ್ ಖಾಸಗಿ ಶಾಲೆಯ ಮುಂಭಾಗ ನೃತ್ಯ ಕಲಿಸಿಕೊಡಲಾಗುತ್ತದೆ ಎಂಬ ಫ್ಲೇಕ್ಸ್‌ಗಳನ್ನು ಹಾಕಲಾಗಿದೆ. ಆದರೆ, ತನಿಖೆಗೆ ಬಂದ ಬಿಬಿಎಂಪಿ ಅಧಿಕಾರಿಗಳು ಶಿಕ್ಷಣ ಹೊರತುಪಡಿಸಿ ಇತರೆ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಶಾಲೆಯ ಮೇಲೆ ಹೆಚ್ಚುವರಿಯಾಗಿ ಕಂದಾಯ ಕಟ್ಟಲು ಹೇಳಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಬಿಬಿಎಂಪಿ ಆಯುಕ್ತ ಹಾಗೂ ಕಂದಾಯ ಸಹಾಯಕ ಅಧಿಕಾರಿಗೆ ಗುರುವಾರ ಕೋರ್ಟ್‌ಗೆ ಖುದ್ದು ಹಾಜರಾಗಲು ಆದೇಶಿಸಿದೆ.





