ಸಚಿವ ರೋಷನ್ ಬೇಗ್ ಬ್ರದರ್ ರೆಹಾನ್ ಬೇಗ್ ನಿರಾಳ
ತೆಲಗಿಗೆ ಛಾಪಾ ಕಾಗದ ಮಾರಾಟ ಪರವಾನಿಗೆ ಕೊಡಿಸಿದ ಆರೋಪ

ಬೆಂಗಳೂರು, ಜು.12: ತೆಲಗಿಗೆ ಮೊದಲ ಬಾರಿಗೆ ಛಾಪಾ ಕಾಗದ ಮಾರಾಟದ ಪರವಾನಿಗೆ ಕೊಡಿಸಿದ ಆರೋಪ ಎದುರಿಸುತ್ತಿದ್ದ ಸಚಿವ ಆರ್.ರೋಷನ್ ಬೇಗ್ ಸಹೋದರ ಡಾ.ರೆಹಾನ್ ಬೇಗ್ ಅವರನ್ನು ಖುಲಾಸೆಗೊಳಿಸಿದ್ದ ವಿಶೇಷ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ಬುಧವಾರ ವಜಾ ಮಾಡಿದೆ. ಈ ಪ್ರಕರಣದಲ್ಲಿ ರೆಹಾನ್ ಬೇಗ್ ವಿರುದ್ಧ ಸುಮಾರು 60 ಸಾಕ್ಷಿಗಳು ಯಾವುದೇ ಸಾಕ್ಷ ನುಡಿಯದೇ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಅಂತೆಯೇ ನಕಲಿ ಛಾಪಾ ಕಾಗದ ಮಾರಾಟದಿಂದ ರೆಹಾನ್ ಬೇಗ್ ಯಾವುದೇ ಹಣಕಾಸಿನ ಲಾಭ ಪಡೆದಿದ್ದಾರೆ ಎಂಬುದಕ್ಕೆ ಪ್ರಾಸಿಕ್ಯೂಷನ್ ಬಳಿ ನಂಬಲರ್ಹ ಪುರಾವೆಗಳಿಲ್ಲ ಎಂಬ ಆಧಾರದ ಮೇಲೆ ಸಿಬಿಐ ಅರ್ಜಿಯನ್ನು ತಳ್ಳಿ ಹಾಕಲಾಗಿದೆ.
Next Story





