ಐಎಸ್‌ಓ 50001 ಸಾಧಿಸಿದ ಮಣಿಪಾಲ ವಿವಿ

ಮಣಿಪಾಲ, ಜು.12: ಇಂಧನದ ಸದ್ಬಳಕೆ, ಇಂಧನದ ನಿರ್ವಹಣೆ ಹಾಗೂ ಇಂಧನದ ಸಾಧನೆಯಲ್ಲಿ ಜಾಗತಿಕ ಅತ್ಯುತ್ತಮ ನಿರ್ವಹಣೆಯನ್ನು ತೋರಿದ ಮಣಿಪಾಲ ವಿವಿಯ ಪ್ರಯತ್ನವನ್ನು ಗುರುತಿಸಿ ಮೇಸಸ್ ಟಿಯುವಿ ರಿಯಿನ್‌ಲ್ಯಾಂಡ್ ಪ್ರೈವೇಟ್ ಲಿ. ಮಂಗಳವಾರ ವಿವಿಯಲ್ಲಿ ನಡೆದ ಸಮಾರಂಭದಲ್ಲಿ ಸರ್ಟಿಫಿಕೇಟ್‌ನ್ನು ಹಸ್ತಾಂತರಿಸಿತು.
ಇಂಧನದ ನಿರ್ವಹಣೆಯಲ್ಲಿ ಮಣಿಪಾಲ ವಿವಿ ಐಎಸ್‌ಓ 50001 ಮಟ್ಟವನ್ನು ಜಾರಿಗೊಳಿಸಿ, ಅತ್ಯುತ್ತಮ ಫಲಿತಾಂಶವನ್ನು ತೋರಿದ್ದು, ಇದನ್ನು ಗುರುತಿಸಿ ಟಿಯುವಿ ಸರ್ಟಿಫಿಕೇಟ್‌ನ್ನು ವಿವಿಗೆ ನೀಡಿದೆ.
ಮಣಿಪಾಲ ವಿವಿ ತನ್ನ ಗುಣಮಟ್ಟದಲ್ಲಿ ಸದಾ ಪ್ರಗತಿಯನ್ನು ತೋರಿಸುವು ದಲ್ಲದೇ, ಪರಿಸರ ಸಂರಕ್ಷಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿಸುತ್ತಿದೆ. ಈ ಮೂಲಕ ಅದು ಐಎಸ್‌ಓ 9001, 14001 ಮಟ್ಟವನ್ನು ಮೀರಿದ ಸಾಧನೆ ಮಾಡಿದೆ ಎಂದು ಸಂಸ್ಥೆ ಹೇಳಿದೆ. ಮಣಿಪಾಲ ವಿವಿ ತನ್ನ ಗುಣಮಟ್ಟದಲ್ಲಿ ಸದಾ ಪ್ರಗತಿಯನ್ನು ತೋರಿಸುವು ದಲ್ಲದೇ, ಪರಿಸರ ಸಂರಕ್ಷಣೆಯಲ್ಲಿ ಅತ್ಯುತ್ತಮ ಸಾನೆತೋರಿಸುತ್ತಿದೆ.
ಈಮೂಲಕ ಅದು ಐಎಸ್‌ಓ 9001,14001ಮಟ್ಟವನ್ನುಮೀರಿದಸಾನೆ ಮಾಡಿದೆ ಎಂದು ಸಂಸ್ಥೆ ಹೇಳಿದೆ. ಐಎಸ್‌ಓ 9001 ಸರ್ಟಿಫಿಕೇಟ್‌ನ್ನು ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಹಾಗೂ ಡಾ.ಜಿ.ಕೆ.ಪ್ರಭು ಸ್ವೀಕರಿಸಿದರೆ, ಐಎಸ್‌ಓ 14001 ಸರ್ಟಿಫಿಕೇಟ್‌ನ್ನು ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಸ್ವೀಕರಿಸಿದರು. ಐಎಸ್‌ಓ 50001 ಸರ್ಟಿಫಿಕೆಟ್‌ನ್ನು ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಸ್ವೀಕರಿಸಿದರು.







