ಜುಗಾರಿ: 9 ಮಂದಿ ಬಂಧನ
ಉಡುಪಿ, ಜು.12: ನಗರದ ನರ್ಮ್ ಬಸ್ ನಿಲ್ದಾಣ ಬಳಿ ಜು.11ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಶಿರ್ವದ ಮುಹಮ್ಮದ್ ಅಝರುದ್ದೀನ್, ಗದಗದ ಮಹಾಂತೇಶ್, ಬಾಗಲಕೋಟೆಯ ಜ್ಯೋತಿಯಪ್ಪ, ರಾಜು ಈರಪ್ಪಸುರಪು, ದಾವಣಗೆರೆಯ ಹನುಮಂತ, ಕಿರಣ್, ಕೊಪ್ಪಳದ ಮಹೇಶ ಎಂಬವರನ್ನು ಬಂಧಿಸಿ 3,060ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ:
ಬಸ್ರೂರು ಬಸ್ ನಿಲ್ದಾಣದ ಬಳಿ ಜು.11ರಂದು ಮಧ್ಯಾಹ್ನ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಮೂಡಕೇರಿಯ ದಿನೇಶ ಪೂಜಾರಿ(26) ಎಂಬಾತನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ:
ಬೀಡಿನಗುಡ್ಡೆ ಜಂಕ್ಷನ್ ಬಳಿ ಜು.11ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಇಂದಿರಾನಗರದ ಪುಂಡಲೀಕ ಪಡಿಯಾರ(57) ಎಂಬವರನ್ನು ಉಡುಪಿ ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Next Story





