ಜು.15: ವರ್ಕಾಡಿಯಲ್ಲಿ ಮಾದಕ ವಸ್ತು ವಿರುದ್ಧ ಅಭಿಯಾನ
ಕಾಸರಗೋಡು, ಜು. 12: ಕೇರಳ ರಾಜ್ಯ ಅಬಕಾರಿ ಇಲಾಖೆಯ ಆದೇಶ ಪ್ರಕಾರ ವರ್ಕಾಡಿ ಗ್ರಾಮ ಪಂಚಾಯತ್ ವತಿಯಿಂದ ವರ್ಕಾಡಿ ಯೂತ್ ಕೋಡಿನೇಶನ್ ಕಮಿಟಿ ಹಾಗೂ ಸಾಕ್ಷರತಾ ಸಮಿತಿಯ ಸಹಕಾರದೊಂದಿಗೆ ಮಾದಕ ವ್ಯಸನಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಏಕದಿನ ಸೆಮಿನಾರ್ “ವಿಮುಕ್ತಿ-2017’’ ಜು.15 ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವಪ್ರಭಾ ಹಾಲ್ ಸುಂಕದಕಟ್ಟೆಯಲ್ಲಿ ಜರಗಲಿದೆ.
ಈ ಸಭೆಯಲ್ಲಿ ಜನ ಪ್ರತಿನಿಧಿಗಳು, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸುವಂತೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





