ಅಪರಾಧಿ ರಾಜಕಾರಣಿಗೆ ರಾಜಕೀಯ ನಿರ್ಬಂದ ತಾನು ನಿರ್ಧರಿಸುವಂತಿಲ್ಲ: ಚುನಾವಣಾ ಆಯೋಗ ಯು ಟರ್ನ್

ಹೊಸದಿಲ್ಲಿ, ಜು. 12: ಇಂತಹ ನಿರ್ಣಾಯಕ ವಿಷಯಗಳಿಂದ ದೂರ ಸರಿಯಿರಿ ಎಂದು ಸುಪ್ರೀಂಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಯು ಟರ್ನ್ ತೆಗೆದುಕೊಂಡಿರುವ ಚುನಾವಣಾ ಆಯೋಗ, ಅಪರಾಧಿ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಬೇಕು ಎಂಬ ಬೇಡಿಕೆ ಬಗ್ಗೆ ತನಗೆ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದೆ.
ವೌನವು ನಿಮಗಿರುವ ಆಯ್ಕೆಯೇ ? ಹೌದು ಅಥವಾ ಅಲ್ಲ ಎಂದು ನೀವು ಹೇಳಲೇ ಬೇಕು. ನೀವು ವೌನವಾಗಿರಲು ಹೇಗೆ ಸಾಧ್ಯ ? ಒಂದು ವೇಳೆ ನೀವು ನಿರ್ಬಂದಕ್ಕೆ ಒಳಗಾದರೆ ದಯವಿಟ್ಟು ನಮಗೆ ತಿಳಿಸಿ ಎಂದು ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ಹೇಳಿದೆ. ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳನ್ನು ಚುನಾವಣೆ ಸ್ಪರ್ಧೆಯಿಂದ ದೂರವಿರಿಸಲು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿತ್ತು. ಈ ದಾವೆಯನ್ನು ಬೆಂಬಲಿಸಿ ಚುನಾವಣಾ ಆಯೋಗ ಎಪ್ರಿಲ್‌ನಲ್ಲಿ ಅಫಿದಾವಿತ್ ಸಲ್ಲಿಸಿತ್ತು. ರಾಜಕೀಯದಲ್ಲಿ ಅಪರಾಧಿ ರಾಜಕಾರಣಿಗಳನ್ನು ದೂರವಿರಿಸುವ ದೂರುದಾರರ ಉದ್ದೇಶಕ್ಕೆ ತಾನು ಬೆಂಬಲ ನೀಡಿರುವುದಾಗಿ ಚುನಾವಣಾ ಆಯೋಗ ಸಂಕ್ಷಿಪ್ತ ಅಫಿದಾವಿತ್‌ನಲ್ಲಿ ಹೇಳಿತ್ತು. ಈ ಬಗ್ಗೆ ನ್ಯಾಯಾಲಯ ಈ ಪ್ರತಿಕ್ರಿಯೆ ನೀಡಿದೆ.
ಚುನಾವಣಾ ಆಯೋಗ ವಿರೋಧಾಬಾಸದ ನಿಲುವನ್ನು ತೆಗೆದುಕೊಳ್ಳುವಂತಿಲ್ಲ. ಈ ವಿಚಾರ ಶಾಸಕಾಂಗದ ಅಧಿಕಾರಕ್ಕೆ ಸಂಬಂಧಿಸಿದ್ದು. ಈ ಬಗ್ಗೆ ನಮ್ಮ ನಿಲ್ಲುವ ಹೇಳುವಂತಿಲ್ಲ ಎಂಬುದು ನನ್ನ ಭಾವನೆ ಎಂದು ನ್ಯಾಯಾಲಯ ಹೇಳಿದೆ.





