ಮೆಡಿಟರೇನಿಯನ್ ಸಮುದ್ರದಲ್ಲಿ ಚೀನಾ ನೌಕೆಗಳಿಂದ ತಾಲೀಮು

ಬೀಜಿಂಗ್, ಜು. 12: ರಶ್ಯ ನೌಕಾಪಡೆಯೊಂದಿಗೆ ಜಂಟಿ ಯುದ್ಧಾಭ್ಯಾಸ ನಡೆಸಲು ತೆರಳುತ್ತಿದ್ದ ವೇಳೆ, ಚೀನಾ ನೌಕಾಪಡೆಯ ನೂತನ ತಲೆಮಾರಿನ ಯುದ್ಧಹಡಗುಗಳು ಈ ವಾರ ಮೆಡಿಟರೇನಿಯನ್ ಸಮುದ್ರದಲ್ಲಿ ನೈಜ ಯುದ್ಧಾಭ್ಯಾಸ ನಡೆಸಿವೆ ಎಂದು ಆ ದೇಶದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
ಹೆಫೈ, ಯುನ್‌ಚೆಂಗ್ ಮತ್ತು ಲುವೊಮಹು ಎಂಬ ವಿವಿಧ ದರ್ಜೆಯ ಯುದ್ಧ ನೌಕೆಗಳು ಸೋಮವಾರದ ಕಾರ್ಯಾಚರಣೆಯಲ್ಲಿ ಭಾಗವಹಿಸಿದವು ಎಂದು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ನೋಟಿಸ್‌ನಲ್ಲಿ ಸಚಿವಾಲಯ ತಿಳಿಸಿದೆ.
ಈ ಕಾರ್ಯಾಚರಣೆಯ ವೇಳೆ ಡೆಕ್ ಗನ್‌ಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಲಾಯಿತು.
Next Story





