ವಂಚನೆಗಾಗಿ ಪಾಕಿಸ್ತಾನವನ್ನು ಉತ್ತರದಾಯಿ ಮಾಡಬೇಕು: ಅಮೆರಿಕ ಸಂಸದ

ವಾಶಿಂಗ್ಟನ್, ಜು.12: ನಿರಂತರವಾಗಿ ಅಮೆರಿಕದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಉತ್ತರದಾಯಿಯನ್ನಾಗಿ ಮಾಡಬೇಕು ಎಂದು ಅಮೆರಿಕದ ರಿಪಬ್ಲಿಕನ್ ಸಂಸದ ಟೆಡ್ ಪೋ ಹೇಳಿದ್ದಾರೆ.
ಪಾಕಿಸ್ತಾನದ ವಿಶ್ವಾಸದ್ರೋಹಕ್ಕಾಗಿ ಆ ದೇಶದೊಂದಿಗಿನ ಸಂಬಂಧಗಳನ್ನು ಕಡಿದುಕೊಳ್ಳಲು ಅಥವಾ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಅಮೆರಿಕ ಮುಂದಾಗುತ್ತಿಲ್ಲ. ಯಾಕೆಂದರೆ, ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ನೇತೃತ್ವದ ಮಿತ್ರ ಪಡೆಗಳಿಗೆ ಸಾಮಗ್ರಿ ಮತ್ತು ಸಲಕರಣೆಗಳ ಪೂರೈಕೆಯು ಪಾಕಿಸ್ತಾನದ ಮೂಲಕವೇ ಹಾದುಹೋಗಬೇಕಾಗುತ್ತದೆ ಎಂದು ‘ವಾಶಿಂಗ್ಟನ್ ಟೈಮ್ಸ್’ನ ಸಂಪಾದಕೀಯ ಪುಟದಲ್ಲಿ ಬರೆದ ಲೇಖನವೊಂದರಲ್ಲಿ ಅವರು ಹೇಳಿದ್ದಾರೆ.
ಆದರೆ, ಈ ಮಹತ್ವದ ಪೂರೈಕೆ ಮಾರ್ಗವನ್ನು ಉಚಿತವಾಗಿ ನೀಡಲಾಗಿಲ್ಲ. ಅದೂ ಅಲ್ಲದೆ, ಪಾಕಿಸ್ತಾನ ಮತ್ತು ನಮ್ಮ ಪಡೆಗಳ ನಡುವೆ ಸಂಘರ್ಷ ನಡೆದಾಗ ಹಲವು ಸಂದರ್ಭಗಳಲ್ಲಿ ಅದು ಈ ಮಾರ್ಗವನ್ನು ಬಂದ್ ಮಾಡಿತ್ತು’’ ಎಂದು ಪೋ ಆರೋಪಿಸಿದ್ದಾರೆ.
Next Story





