ಸೋಲಾಪುರ-ಬಿಜಾಪುರ ವಲಯದಲ್ಲಿ ಎನ್‌ಎಚ್ 52 ಚತುಷ್ಪಥ ರಸ್ತೆ ನಿರ್ಮಿಸಲು ಕೇಂದ್ರ ಅಸ್ತು

ಹೊಸದಿಲ್ಲಿ, ಜು. 12: ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈಗಿರುವ ಎರಡು ರಸ್ತೆಗಳ ಬದಲಾಗಿ ಸೋಲಾಪುರ-ಬಿಜಾಪುರ ವಲಯದಲ್ಲಿ ನೂತನ ಎನ್‌ಎಚ್ 52 ( ಈ ಹಿಂದೆ ಎನ್‌ಎಚ್ 13) ಚತುಷ್ಪಥ ನಿರ್ಮಾಣಕ್ಕೆ ಕೇಂದ್ರ ಸರಕಾರ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ಯೋಜನೆಗೆ ಅನುಮೋದನೆ ನೀಡಿದ್ದು, ಪೂರ್ವಭಾವಿ ಚಟುವಟಿಕೆಗೆ 118 ಕಿ.ಮೀ. ಉದ್ದದ ರಸ್ತೆ ನಿರ್ಮಾಣ, ಭೂಸ್ವಾಧೀನದ ವೆಚ್ಚ ಸೇರಿದಂತೆ ಒಟ್ಟು 1,889 ಕೋಟಿ ರೂ. ಆಗಲಿದೆ.
ಈಗಿರುವ ಎರಡು ಲೇನ್‌ಗಳು ಮಹಾರಾಷ್ಟ್ರದ ಸೋಲಾಪುರ, ಟಾಲ್ಕಿ ಹಾಗೂ ನಂದನಿ ಹಾಗೂ ಕರ್ನಾಟಕದ ಜಾಲ್ಕಿ, ಹೊರಟ್ಟಿ, ಬಿಜಾಪುರದ ಮೂಲಕ ಹಾದು ಹೋಗುತ್ತದೆ.
ಎರಡು ನಗರಗಳ ನಡುವಿನ ಪ್ರಯಾಣ ಸಮಯ ಹಾಗೂ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ ಮಾಡಲು ಸೋಲಾಪುರ, ಬಿಜಾಪುರದಲ್ಲಿ ಬೈಪಾಸ್ ಹಾಗೂ ಆರು ಫ್ಲೈ ಓವರ್‌ಗಳನ್ನು ನಿರ್ಮಿಸಿ ಈ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
Next Story





