ಉತ್ತರ ಕೊರಿಯದಲ್ಲಿ ಭೂಕಂಪ: ಪರಮಾಣು ಸ್ಫೋಟವಲ್ಲ ಎಂದ ಪರಿಣತರು

ಸಿಯೋಲ್, ಜು. 13: ಉತ್ತರ ಕೊರಿಯದ ಸಮುದ್ರದಲ್ಲಿ ಗುರುವಾರ 5.9ರ ತೀವ್ರತೆಯ ಭೂಕಂಪವೊಂದು ಸಂಭವಿಸಿದೆ.
ದೇಶದ ಶಸ್ತ್ರಾಸ್ತ್ರ ಕಾರ್ಯಕ್ರಮದ ಮೇಲೆ ನಿಗಾ ಇಡುವವರು ಇದು ಭೂಕಂಪವೇ ಅಥವಾ ಪರಮಾಣು ಪರೀಕ್ಷೆಯೇ ಎಂದು ತಿಳಿಯದೆ ಒಂದು ಕ್ಷಣ ಗೊಂದಲಕ್ಕೊಳಗಾದರು.ಆದಾಗ್ಯೂ, ಪರಮಾಣು ಪರೀಕ್ಷೆಯಿಂದಾಗಿ ಭೂಮಿ ಕಂಪಿಸಿಲ್ಲ ಎಂಬುದಾಗಿ ಅಂತಿಮವಾಗಿ ಪರಿಣತರು ಘೋಷಿಸಿದರು.
ಅಮೆರಿಕ ಖಂಡವನ್ನು ತಲುಪುವ ಸಾಮರ್ಥ್ಯವುಳ್ಳ ಪರಮಾಣು ಶಕ್ತ ಕ್ಷಿಪಣಿಯ ಪರಿಪೂರ್ಣತೆಗೆ ಉತ್ತರಕೊರಿಯ ಇನ್ನೊಂದು ಪರಮಾಣು ಪರೀಕ್ಷೆಯನ್ನು ನಡೆಸಬೇಕಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.ಪ್ಯಾಂಗ್‌ಯಾಂಗ್ ಜುಲೈ 4ರಂದು ತನ್ನ ಮೊದಲ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯ ಪರೀಕ್ಷಾ ಹಾರಾಟ ನಡೆಸಿತ್ತು.
ಉತ್ತರ ಕೊರಿಯ ಹಿಂದೆ ನಡೆಸಿದ ಐದು ಪರಮಾಣು ಪರೀಕ್ಷೆಗಳು ಕೃತಕ ಭೂಕಂಪದ ಲಕ್ಷಣಗಳನ್ನು ಸೃಷ್ಟಿಸಿದ್ದವು.
Next Story





