ಡೆಂಗ್ ಗೆ ಮಹಿಳೆ ಬಲಿ: ವಕೀಲರಿಂದ ಪ್ರತಿಭಟನೆ
ಶಿರಾ, ಜು.12: ನಗರದಲ್ಲಿ ಶಂಕಿತ ಡೆಂಗ್ ರೋಗಕ್ಕೆ 34ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದಾಳೆ. ಡೆಂಗ್ ಜ್ವರಕ್ಕೆ ಇಂದು ಎರಡನೇ ಪ್ರಕರಣವಾಗಿದೆ.
ನಗರದ ಸಂತೆಪೇಟೆ ವಾಸಿ ಮಹದೇವಮ್ಮ(34) ವರ್ಷ ಈಕೆಗೆ ಕಳೆದ ಮೂರುದಿನದಹಿಂದೆ ಜ್ವರ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಜ್ವರಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುದುವಾರ ರಾತ್ರಿ ಮೃತಪಟ್ಟಿದು. ನಗರದಲ್ಲಿ ಶಂಕಿತ ಡೆಂಗ್ ಮಹಾಮಾರಿಯ ಆರ್ಭಟಿಸಿದ್ದು, ಮಹಾಮಾರಿಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಶಂಕಿತ ಡೆಂಗ್ ಮಹಾಮಾರರಿಗೆ ತುತ್ತಾದವರ ಸಂಖ್ಯೆ ಎರಡಕ್ಕೆ ಹೆಚ್ಚಳವಾಗಿದೆ.
ಮಹಾಮಾರಿ ಡೆಂಗ್ ರೋಗಕ್ಕೆ ಜನರು ಬಲಿಯಾಗುತ್ತಿದ್ದರೂ ನಗರಸಭೆ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡಂತೆ ಕಂಡುಬರುತ್ತಿಲ್ಲ. ಈಗಲಾದರೂ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಡೆೆಂಗ್ ತಡೆಗಟ್ಟಲು ಮುಂದಾಗಬೇಕು ಎಂದು ನಗರದ ನಾಗರಿಕರು ಒತ್ತಾಯಿಸಿದಾರೆ.
ನ್ಯಾಯಾಲಯ ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ; ಡೆಂಗ್ ಜ್ವರಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟೆಯ ಹಿನ್ನೆಲೆಯಲ್ಲಿ ನಗರದಲ್ಲಿ ವಕೀಲರು ಕೋರ್ಟು ಕಲಾಪ ಬಹಿಷ್ಕರಿಸಿ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದರು. ನಗರದಾದ್ಯಂತ ಡೆಂಗ್ ವ್ಯಾಪಕವಾಗಿ ಹರಡುತ್ತಿದ್ದು, ತಾಲೂಕು ಆಡಳಿತ ಹಾಗೂ ನಗರಸಭೆಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಹಲವು ಕಡೆಗಳಲ್ಲಿ ಅಶುಚಿತ್ವ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಕಾಯಿಲೆಗಳು ವ್ಯಾಪಿಸುತ್ತಿದೆ. ಅಧಿಕಾರಿಗಳು ಸೊಳ್ಳೆಯನಿಯಂತ್ರಣಕ್ಕೆ ಫಾಗಿಂಗ್ ವ್ಯವಸ್ಥೆ ಮತ್ತು ಡಿಡಿಟಿ ಸಿಂಪಡಿಸುತ್ತಿಲ್ಲ. ಕೂಡಲೇ ಸರಕಾರ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘ ಪದಾಧಿಕಾರಿಗಳು ಮತ್ತಿತರು ಭಾಗವಹಿಸಿದ್ದರು.









