ಭಟ್ಕಳ: ದೋಣಿ ಮುಗುಚಿ ಓರ್ವ ಮೀನುಗಾರ ಮೃತ್ಯು
ಭಟ್ಕಳ, ಜು.13: ಫಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಮಗುಚಿ ಸಾವನ್ನಪ್ಪಿದ ಘಟನೆ ಮುರಡೇಶ್ವರದಲ್ಲಿ ವರದಿಯಾಗಿದೆ.
ಮೃತ ಮೀನುಗಾರನನ್ನು ಮುರ್ಡೇಶ್ವರ ಮಠದ ಹಿತ್ಲು ಓತನಮನೆ ನಿವಾಸಿ ಕುಪ್ಪ ತಂದೆ ಮಾಸ್ತಿ ಹರಿಕಾಂತ (56) ಎಂದು ಗುರುತಿಸಲಾಗಿದೆ.
ಇವರು ಗುರುವಾರ ಬೆಳಿಗ್ಗೆ ಮೀನುಗಾರಿಕೆಗೆಂದು ತನ್ನ ಪಾತಿ ದೋಣಿಯಲ್ಲಿ ಅರಬ್ಬೀ ಸಮುದ್ರಕ್ಕೆ ಹೋಗಿದ್ದು, ಮೀನುಗಾರಿಕೆಗೆಯನ್ನು ಮಾಡುತ್ತಿರುವಾಗಲೇ ದೋಣಿ ಮಗುಚಿದ್ದರಿಂದ ನೀರನಿಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಮೀನುಗಾರಿಕೆಗೆ ತೆರಳಿದ್ದ ಇವರ ದೇಹ 6.30 ರ ಸುಮಾರಿಗೆ ಕಂಡು ಬಂದಿದ್ದು, ಸ್ಥಳೀಯರು ಗುರುತಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಮುರ್ಡೇಶ್ವರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಶವ ಮಹಜರು ನಡೆಸಿ ವಾರಿಸುದಾರರಿಗೆ ಬಿಟ್ಟುಕೊಟ್ಟಿದ್ದಾರೆ.
ಮುರ್ಡೇಶ್ವರ ಎಸ್. ಐ. ಭೀಮಸಿಂಗ ಲಮಾಣಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Next Story





