ಪ್ರಥಮ ಪಿಯು ತರಗತಿಯ ದಾಖಲಾತಿ ಜು..25ರವರೆಗೆ ವಿಸ್ತರಣೆ
ಬೆಂಗಳೂರು, ಜು.13: 2017-18ನೆ ಸಾಲಿನ ಪ್ರಥಮ ಪಿಯು ತರಗತಿಗಳ ದಾಖಲಾತಿ ದಿನಾಂಕವನ್ನು ಆ.25ರವರೆಗೆ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಮೊದಲು ಪ್ರಥಮ ಪಿಯು ದಾಖಲಾತಿಯನ್ನು ದಂಡ ಶುಲ್ಕ ಸಹಿತ ಜು.12 ಕೊನೆ ದಿನಾಂಕವಾಗಿತ್ತು. ಆದರೆ, ಹಲವು ವಿದ್ಯಾರ್ಥಿಗಳು ನಾನಾ ಕಾರಣಗಳಿಂದ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲದ ಕಾರಣ ದಾಖಲಾತಿಯ ಅವಧಿಯನ್ನು ವಿಶೇಷ ದಂಡ ಶುಲ್ಕದೊಂದಿಗೆ ಜು.25ರವರೆಗೆ ವಿಸ್ತರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





