ಲಂಚ ಸ್ವೀಕಾರ ಆರೋಪ: ಪೇದೆ ಅಮಾನತು
ಮದ್ದೂರು, ಜು.13: ಕೋರ್ಟ್ ವಾರಂಟ್ ನೀಡುವುದಕ್ಕೆ ಗುತ್ತಿಗೆದಾರರೊಬ್ಬರರಿಂದ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಪಟ್ಟಣ ಠಾಣೆಯ ಪೇದೆ ಸಿ.ರಾಜೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜೇಂದ್ರ, ಕೋಟ್ ವಾರಂಟ್ ನೀಡಲು ಗುತ್ತಿಗೆದಾರ ಬಸವೇಗೌಡ ಅವರಿಂದ ಎರಡು ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ರಾಜೇಂದ್ರ ಅವರನ್ನು ತನ್ನ ಮನೆಗೆ ಕರೆಸಿಕೊಂಡ ಬಸವೇಗೌಡ ಒಂದು ಸಾವಿರರೂ. ಲಂಚ ನೀಡಿರುವ ದೃಶ್ಯಾವಳಿ ಬಸವೇಗೌಡರ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರವು ದೃಶ್ಯಾವಳಿ ಸಮೇತ ರಾಜೇಂದ್ರ ವಿರುದ್ಧ ಬಸವೇಗೌಡ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್ಪಿ ಸದರಿ ಪೇದೆಯನ್ನು ಸೇವೆಯಿಂದ ಅಮಾನತುಪಡಿಸಿದ್ದಾರೆ.
Next Story





