ಜು.16 ಪುತ್ತೂರಿನಲ್ಲಿ ’ಮುಂಗಾರು ಕವಿಗೋಷ್ಟಿ’
ಪುತ್ತೂರು, ಜು.13; ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ಜು.16ರಂದು ಅಪರಾಹ್ನ ಇಲ್ಲಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮುಂಗಾರು ಕವಿ ಗೋಷ್ಟಿ ಕಾರ್ಯಕ್ರಮ ನಡೆಯುವುದು ಎಂದು ಬೊಳುವಾರು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು ಅವರು ತಿಳಿಸಿದ್ದಾರೆ.
ಕವಿಯತ್ರಿ, ಸುದಾನ ಶಾಲೆಯ ಶಿಕ್ಷಕಿ ಕವಿತಾ ಅಡೂರ್ ಅವರು ಉದ್ಘಾಟಿಸುವರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸುವರು. ಕೆನರಾ ಬ್ಯಾಂಕಿನ ವಿಶ್ರಾಂತ ಮೆನೇಜರ್ ಆಗಿರುವ ಸಾಹಿತಿ ನಲ್ಕ ಗೋಪಾಲಕೃಷ್ಣ ಆಚಾರ್ ಮತ್ತು ಯುವ ರೋಟರಿ ಕ್ಲಬ್ ಅಧ್ಯಕ್ಷ ಉಮೇಶ್ ನಾಯಕ್ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.
ಕವಿಗೋಷ್ಟಿಯಲ್ಲಿ ಗೋಪಾಲಕೃಷ್ಣ ಶಗ್ರಿತ್ತಾಯ, ಬಾ.ಬಾ. ಉಜಿರೆ, ಸಹನಾ ಕಾಂತಬೈಲು,ಮುಹಮ್ಮದ್ ಮಾರಿಪಳ್ಳ, ಎಂ.ಪಿ ಬಶೀರ್ ಅಹಮ್ಮದ್, ವಿಶ್ವನಾಥ ನೇರಳಕಟ್ಟೆ,ಕೆ.ರಾಜಾರಾಮ್ ಹಾರಾಡಿ, ಶಿವಕುಮಾರ್ ನರಿಮೊಗರು, ಜಯಶ್ರೀ ಬಿ. ಕದ್ರಿ, ರಮೇಶ್ ಪಿ ನೆಹರುನಗರ, ಚಂದ್ರಾವತಿ ಕೊಂರ್ಬಡ್ಕ, ಹೇಮಾ ಗಣೇಶ್ ಕಜೆಗದ್ದೆ, ಜಯಶ್ರೀ ಪುಣಚ, ಪ್ರಿಯಾ ಎಸ್. ಕಾಟುಕುಕ್ಕೆ, ಶ್ರೀನಿಧಿ ವಿದ್ಯಾಪುರ, ಸುಶ್ಮಿತಾ ಕೆ. ಪೆರುವಾಜೆ, ರಶ್ಮಿ ರಾಮಕುಂಜ, ಜಯಶ್ರೀ ರಾಮಕುಂಜ,ಶ್ರಾವ್ಯ ರಾಮಕುಂಜ, ಅಪೂರ್ವ ಕೊಲ್ಯ, ಸುಶ್ಮಿತಾ ಡಿ,ಆರ್ ಹಾಗೂ ಎ.ಎಸ್.ನಾರಾಯಣ ಭಟ್ ಕವನ ವಾಚನ ಮಾಡುವರು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







