ಅಮರನಾಥ ಯಾತ್ರಿಕರ ಹತ್ಯೆಗೈದ ಭಯೋತ್ಪಾದಕರು ಬೈಕಲ್ಲಿ ಬಂದರು ?

ಹೊಸದಿಲ್ಲಿ, ಜು.13: ಅಮರನಾಥ್ ಯಾತ್ರಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಬೈಕ್‌ನಲ್ಲಿ ಬಂದಿರುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಸ್‌ನ ಮೇಲೆ 75 ಅಡಿ ಅಂತರದಲ್ಲಿ ಎರಡು ಬಾರಿ, ಎರಡು ಭಯೋತ್ಪಾದಕ ಗುಂಪುಗಳಿಂದ ದಾಳಿ ನಡೆಸಲಾಗಿದೆ. ಬಸ್‌ನ ಮುಂಭಾಗ ಮತ್ತು ಬಲ ಬದಿಯಿಂದ ಭಯೋತ್ಪಾದಕರು ಗುಂಡಿನ ಸುರಿಮಳೆಗೈದರು. ಈ ಘಟನೆಯಲ್ಲಿ ಗುಜರಾತ್‌ನ 7 ಮಂದಿ ಮೃತಪಟ್ಟರು ಹಾಗೂ 21 ಮಂದಿ ಗಾಯಗೊಂಡರು.
ಗುಂಡಿನ ಸದ್ದು ಕೇಳಿ ಕೇಂದ್ರ ಮೀಸಲು ಪಡೆಯ ಬೆಂಗಾವಲು ವಾಹನ ಹಾಗೂ ಜಮ್ಮ ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿತು. ಆಗ ಭಯೋತ್ಪಾದಕರು ಅಲ್ಲೇ ಇದ್ದರು. ಅವರೊಂದಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಕೇಂದ್ರ ಮೀಸಲು ಪಡೆಯ ಪ್ರಾಥಮಿಕ ವರದಿ ತಿಳಿಸಿದೆ.
ಅನಂತರ ಇಲ್ಲಿಂದ 1.5 ಕಿ. ಮೀ. ದೂರದಲ್ಲಿರುವ ಅರ್ವಾನಿ ಗ್ರಾಮದತ್ತ ಪರಾರಿಯಾದರು. ಇದಕ್ಕಿಂತ ಮುನ್ನ ಹಸನ್‌ಪುರದ ಕೇಂದ್ರ ಮೀಸಲು ಪಡೆಯ ಕ್ಯಾಂಪ್‌ನ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಸಿಆರ್‌ಪಿಎಫ್ ಹೇಳಿದೆ.





