ಯಡಿಯೂರಪ್ಪ ಪ್ರಚೋದನಕಾರಿ ಹೇಳಿಕೆ: ಪ್ರಕರಣ ದಾಖಲಿಸಲು ಎಸ್.ಡಿ.ಪಿ.ಐ ಆಗ್ರಹ
ಮಂಗಳೂರು, ಜು. 13: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ 'ಪ್ರಭಾಕರ್ ಭಟ್ ಬಂಧನವಾದ್ದಲ್ಲಿ ರಾಜ್ಯದಲ್ಲಿ ಬೆಂಕಿ ಹೊತ್ತಿ ಉತಿಯುತ್ತೆ' ಎಂಬ ಉದ್ರೇಕಕಾರಿ, ಕಾನೂನು ವಿರೋಧಿ ಹೇಳಿಕೆ ನೀಡಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡಿಸುತ್ತದೆ.
ಜಿಲ್ಲೆಯಲ್ಲಿ ಶಾಂತಿಯು ಮರುಕಳಿಸುತ್ತಿರುವಾಗ ಮತ್ತೊಮ್ಮೆ ಅಶಾಂತಿಯನ್ನು ಸೃಷ್ಟಿಸುವಂತಹ ಹೇಳಿಕೆ ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ನೀಡಿರುವುದರಿಂದ ಅವರ ನೈಜ ಸಂಸ್ಕೃತಿ ಬಯಲಾಗಿದೆ. ಮಾತ್ರವಲ್ಲದೆ ಅವರಿಗೆ ರಾಜಕೀಯ ಲಾಭಕ್ಕಾಗಿ ಅಶಾಂತಿಯೇ ಬೇಕಾದದ್ದು ಎಂಬುದು ಸಾಬೀತಾಗಿದೆ.
ಕಾರ್ತಿಕ್ ರಾಜ್ ಹತೈಯ ಸಂದರ್ಭದಲ್ಲಿ ಇದೇ ರೀತಿಯ ಉದ್ರೇಕಕಾರಿ ಭಾಷಣ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಇವತ್ತು ಅದರ ಕಷ್ಟ ಜಿಲ್ಲೆಯ ಜನತೆ ಅನುಭವಿಸುತ್ತಿರುವಾಗ ಮತ್ತೆ ಅದೇ ರೀತಿಯ ಚಾಳಿ ಬಿಜೆಪಿ ಮುಂದುವರಿಸಿದೆ. ಶಾಂತಿ ಸಭೆಯನ್ನು ಬಹಿಷ್ಕರಿಸಿದವರಿಂದ ಯಾವ ರೀತಿಯ ಶಾಂತಿಯ ವಾತಾವರಣವನ್ನು ನಿರ್ಮಿಸಲು ಸಾಧ್ಯ?
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವಿರತ ಶ್ರಮ ಪಡುತ್ತಿರುವ ಪೊಲೀಸ್ ಇಲಾಖೆಗೆ ಒಡ್ಡಿದ ಬಹಿರಂಗ ಬೆದರಿಕೆಯಾಗಿರುವುದರಿಂದ, ಮತ್ತು ಸಾಮಾಜದ ಸ್ವಾಸ್ಥ ಕೆಡಿಸಲು ಮತ್ತೊಮ್ಮೆ ಪ್ರಚೋದನೆಯನ್ನು ನೀಡಿದ ಯಡಿಯೂರಪ್ಪ ರ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಜಿಲ್ಲಾಧಿಕಾರಿಯನ್ನು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







