ಬ್ಯಾಂಕ್‌ನಲ್ಲಿ ಆಧಾರ್ ಕೇಂದ್ರ ?

ಹೊಸದಿಲ್ಲಿ, ಜು. 13: ಮುಂದಿನ ವಾರದದಿಂದ 10 ಶಾಖೆಗಳಲ್ಲಿ ಒಂದು ಶಾಖೆಯಲ್ಲಿ ಆಧಾರ್ ನೋಂದಣಿ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಯುಐಡಿಎಐ ವಿನಂತಿಸಿದೆ.
ಆಧಾರ್‌ಗೆ ಕೆಲವು ನಿಯಂತ್ರಣ ಹೇರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಲವು ಬದಲಾವಣೆ ಮಾಡಲಾಗಿತ್ತು.
ಪ್ರಸ್ತುತ ದೇಶಾದ್ಯಂತ 25 ಸಾವಿರ ಸಕ್ರಿಯ ಆಧಾರ್ ದಾಖಲಾತಿ ಕೇಂದ್ರಗಳಿವೆ. ಆದರೆ, ಇದು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಕೇಂದ್ರವೂ ಬ್ಯಾಂಕ್ ಆವರಣದಲ್ಲಿ ಕಾರ್ಯಾಚರಿಸುತ್ತಿಲ್ಲ.
ಆಗಸ್ಟ್ ಅಂತ್ಯದ ಒಳಗೆ 10 ಶಾಖೆಗಳಲ್ಲಿ ಒಂದು ಶಾಖೆ ಆವರಣದಲ್ಲಿ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಸೌಲಭ್ಯ ಕಲ್ವಿಸಲು ನಾವು ಸರಕಾರಿ ಹಾಗೂ ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿ ವಿನಂತಿಸಿದ್ದೇವೆ ಎಂದು ಯುಐಡಿಎಐ ಹೇಳಿದೆ.
ಭಾರತದಲ್ಲಿ 120,000 ಬ್ಯಾಂಕ್ ಬ್ರಾಂಚ್‌ಗಳಿವೆ. ಇದರಿಂದ 12 ಸಾವಿರ ಶಾಖೆಗಳಲ್ಲಿ ಆಧಾರ್ ನೋಂದಣಿ ಹಾಗೂ ಪರಷ್ಕರಣೆ ಕೇಂದ್ರಗಳನ್ನು ಆರಂಭಿಸ ಬಹುದು ಎಂದು ಯುಐಡಿಎಐ ತಿಳಿಸಿದೆ.
Next Story





