ಸರಕಾರದ ವಿರುದ್ಧದ 350 ಪ್ರಕರಣಗಳು ಬಾಕಿ

ಹೊಸದಿಲ್ಲಿ, ಜು. 13: ಸರಕಾರದ ವಿರುದ್ಧ ಸುಮಾರು 350 ನ್ಯಾಯಾಂಗ ನಿಂದನೆ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದು ಕಾನೂನು ಸಚಿವಾಲಯ ಪ್ರತಿಪಾದಿಸಿದೆ.
ದತ್ತಾಂಶದ ಪ್ರಕಾರ 2017 ಜೂನ್ 12ರ ವರೆಗೆ ಸರಕಾರದ ವಿರುದ್ಧದ 1,35,060 ಪ್ರಕರಣಗಳು ಹಾಗೂ 369 ನ್ಯಾಯಾಂಗ ನಿಂದನೆ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ.
ಈ ಸರಕಾರದ ವಿರುದ್ಧದ ದಾವೆಗಳಲ್ಲಿ ಸೇವಾ ವಿಷಯ, ಖಾಸಗಿ ಸಂಸ್ಥೆಗಳೊಂದಿಗಿನ ವಿವಾದ, ಸರಕಾರಿ ಇಲಾಖೆಗಳ ನಡುವಿನ ವಿವಾದ ಹಾಗೂ ಸಾರ್ವಜನಿಕ ರಂಗದ ಸಂಸ್ಥೆಗಳ ನಡುವಿನ ವಿವಾದ ಪ್ರಕರಣಗಳು ಸೇರಿವೆ.
ನ್ಯಾಯಾಂಗದ ನಿರ್ದೇಶನ ಪಾಲಿಸದೇ ಇರುವುದು, ಪ್ರಮಾಣಪತ್ರ ಸಲ್ಲಿಸಲು ವಿಫಲವಾಗುವುದು ಈ ಮೊದಲಾದ ಹಿನ್ನೆಲೆಯಲ್ಲಿ ಸರಕಾರ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಎದುರಿಸುತ್ತಿದೆ.
ಈ ದಾಖಲೆಯನ್ನು ಜೂನ್‌ನಲ್ಲಿ ಸಿದ್ಧಪಡಿಸಲಾಗಿದೆ. ಆದರೆ, ನ್ಯಾಯಾಂಗ ನಿಂದನೆಗೆ ಕಾರಣಗಳನ್ನು ತಿಳಿಸಿಲ್ಲ.
Next Story





