ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ದುರ್ವರ್ತನೆ: ತೆಲಂಗಾಣ ಶಾಸಕ ಬಂಧನ

ಹೈದರಾಬಾದ್, ಜು. 13: ಕಚೇರಿ ಕಾರ್ಯಕ್ರಮದ ಸಂದರ್ಭ ಜಿಲ್ಲಾ ದಂಡಾಧಿಕಾರಿ ಪ್ರೀತಿ ಮೀನಾ ಅವರೊಂದಿಗೆ ದುರ್ವರ್ತನೆ ತೇರಿದ ಆರೋಪದಲ್ಲಿ ಸ್ಥಳೀಯ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಮೆಹಬೂಬ್‌ಬಾದ್ ಪೊಲೀಸರು ಶಂಕರ್ ನಾಯ್ಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಆಗಮಿಸಿದ ಶಾಸಕನನ್ನು ಪೊಲೀಸರು ಬಂಧಿಸಿದರು. ಅನಂತರ ಜಾಮೀನು ಮೇಲೆ ಬಿಡುಗಡೆ ಮಾಡಿದರು.
ಮೆಹಬೂಬ್‌ಬಾದ್‌ನಲ್ಲಿ ಬುಧವಾರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯ್ಕಿ ಅಧಿಕಾರಿಯನ್ನು ಮುಂದೆ ಹೋಗುವಂತೆ ತಿಳಿಸಿ ಅವರ ತೋಳನ್ನು ಎತ್ತಿದ್ದ. ಅಧಿಕಾರಿಗಳು ತರಾತುರಿಯಲ್ಲಿರಬೇಕಾದಾರೆ ಹಾಗೂ ಟಿಆರ್‌ಎಸ್ ಕಾರ್ಯಕರ್ತರು ಸುತ್ತಲೂ ಇರುವಾಗ ಶಾಸಕ ಅವರ ತೋಳು ಹಿಡಿದು ಎತ್ತಿರುವುದನ್ನು ಟ.ವಿ. ದೃಶ್ಯಾವಳಿ ಸ್ಪಷ್ಟಪಡಿಸಿದೆ.
Next Story





