ಜು.16: ಈದ್ ಸೌಹಾರ್ದ ಕೂಟ
ಮಂಗಳೂರು, ಜು.14: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಇದರ ವತಿಯಿಂದ ಜು.16ರಂದು ಸಂಜೆ 7:15ಕ್ಕೆ ಕಾಸಿಯಾ ಮೋರ್ಗನ್‌ಗೇಟ್‌ನ ಕಾಸಿಯಾ ಚರ್ಚ್‌ಹಾಲ್‌ನಲ್ಲಿ ಈದ್ ಸೌಹಾರ್ದ ಕೂಟ ಜರಗಲಿದೆ.
ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ರಾಮಕೃಷ್ಣ ಯಾಜಿ, ಜಪ್ಪು ಕುಡ್ಪಾಡಿಯ ಕರುಣಾಮಯ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಎಲಿಯಾಸ್ ಪೀಟರ್ ಕೊಹಿಲೊ, ಫಾರ್ವರ್ಡ್ ಕೌನ್ಸಿಲಿಂಗ್ ಸೆಂಟರ್‌ನ ಸಲಹೆಗಾರ ಸಈದ್ ಇಸ್ಮಾಯೀಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





