ಸಿದ್ದರಾಮಯ್ಯ ಸರಕಾರದಿಂದ ರೈತರಿಗೆ ಅನುಕೂಲ: ಶಾಸಕ ನರೇಂದ್ರ
.jpg)
ಹನೂರು, ಜು.14: ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರೈತರಿಗೆ ಹೆಚ್ಚು ಕೃಷಿ ಸಂಬಂಧಿಸಿದ ಉತ್ಪನ್ನಗಳನ್ನು ರಿಯಾಯಿತಿದರದಲ್ಲಿ ನೀಡುತ್ತಿದ್ದು . ತನ್ಮೂಲಕ ಇದನ್ನು ಬೆಳಸಿ ಕಡಿಮೆ ನೀರಿನಲ್ಲಿ ಹೆಚ್ಚು ಹೆಚ್ಚು ಬೆಳೆಗಳನ್ನು ರೈತರು ಬೆಳಯಬೇಕು ಎಂದು ಶಾಸಕ ನರೇಂದ್ರ ತಿಳಿಸಿದರು.
ಕ್ಷೇತ್ರ ವಾಪ್ತಿಯ ರಾಮಪುರ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಸಂಬಂಧಿಸಿದ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು, ಈ ದಿನ ಒಟ್ಟು 131 ಪಲಾನುಭವಿಗಳಿಗೆ 30ಲಕ್ಷ ರೂ.ಗಳ ವೆಚ್ಚದಲ್ಲಿ ಕೃಷಿ ಸಂಬಂಧಿಸಿದ ಪಂಪ್‍ಸಟ್ ರಾಗಿ ಮಿಷನ್ ತಾರ್ಪಲ್ ನೀಡಲಾಗುತ್ತಿದ್ದು. ರೈತರು ಈ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೆಚ್ಚು ಬೆಳೆಗಳನ್ನು ಬೆಳೆಯಬೇಕು. ಕ್ರಷ್ಣ ಬೈರೇಗೌಡ್ರು ಕೃಷಿ ಸಚಿವರಾದ ಮೇಲೆ ಕೃಷಿ ಚಟುವಟಕೆಗಳಲ್ಲಿ ಬಹಳ ಸುದಾರಣೆಗಳು ಆಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿಯೇ ಹನೂರು ಕ್ಷೇತ್ರ ನಂ. 1 ಸ್ಥಾನದಲ್ಲಿದೆ ಎಂದರು. ಕೃಷಿಹೊಂಡಾವನ್ನು 1080 ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ . ಇನ್ನು ಮುಂದೆನೂ ಸಹ ಹೆಚ್ಚು ಹೆಚ್ಚು ಕೃಷಿಹೊಂಡಗಳನ್ನು ಬಳಸಿ ತಮ್ಮತಮ್ಮ ಜಮೀನಗಳಲ್ಲಿ ಹರಿದು ಬೇರೆಡೆಗೆ ಹೋಗದ ರೀತಿಯಲ್ಲಿ ಸಂಗ್ರಹಿಸಿ ಬಳಕೆ ಆಗುವಂತೆ ಮಾಡಬೇಕು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಿಕೂಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಉಪಾಧ್ಯಕ್ಷ ಬಸವರಾಜು, ತಾ.ಪಂ.ಅಧ್ಯಕ್ಷರಾಜು, ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಶಿವಮ್ಮ, ಮರಗದಮಣಿ, ತಾ.ಪಂ.ಸದಸ್ಯರಾದ ಜಾವೀದ್ ಅಹಮ್ಮದ್, ರಾಜೇಂದ್ರ, ರಾಮಾಪುರತಾ.ಪಂ. ಅಧ್ಯಕ್ಷ ಮುರುಡೇಶ್ವರ ಸ್ವಾಮಿ ಇನ್ನಿತರರು ಹಾಜರಿದ್ದರು.





