ದೇಶದಲ್ಲೀಯೇ ಕರ್ನಾಟಕ ಮಾದರಿ ರಾಜ್ಯ: ವಿಷ್ಣುನಾಥನ್
.jpg)
ಹನೂರು, ಜು.14: ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಹಾಕುತ್ತೇನೆ ಎಂದು ಹೇಳಿದ್ದ ನರೇಂದ್ರ ಮೋದಿ 15 ಲಕ್ಷವಲ್ಲ ಕೇವಲ 15 ರೂ.ಗಳನ್ನು ಜನರ ಖಾತೆ ಹಾಕಿಲ್ಲ. ಪ್ರಧಾನಿ ಮೋದಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಎ.ಐ.ಸಿ.ಸಿ. ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗೀಯ ಉಸ್ತುವಾರಿ ವಿಷ್ಣುನಾಥನ್ ನುಡಿದರು.
ಕ್ಷೇತ್ರ ವ್ಯಾಪ್ತಿಯ ರಾಮಪುರ ಗ್ರಾಮದಲ್ಲಿ ಆಯೋಜಿಸಿದ್ದ ರಾಮಪುರ ಬ್ಲಾಕ್ ಕಾಂಗ್ರೇಸ್ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಇವರು, ಎಐಸಿಸಿ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ 165 ಪ್ರಣಾವಳಿಕಗಳ ಪೈಕಿ150ಕ್ಕೂ ಭರವಸೆಗಳನ್ನು ಈಡೇರಿಸಿದ್ದು, ದೇಶದಲ್ಲೀಯೇ ಕರ್ನಾಟಕ ಮಾದರಿ ರಾಜ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಚಾ.ನಗರ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾದ ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರು, ಉಪಾಧ್ಯಕ್ಷ ಬಸವರಾಜು, ಕೆ.ಪಿ.ಸಿ.ಸಿ ಕಾರ್ಯದರ್ಶಿ ಬಸವರಾಜು, ಪುಟ್ಟುಬುದ್ದಿ, ತಾ.ಪಂ.ಅಧ್ಯಕ್ಷರಾಜು, ಜಿಲ್ಲಾ ಪಂಚಾತ್ ಸದಸ್ಯೆಯರಾದ ಶಿವಮ್ಮ, ಮರಗದಮಣಿ, ತಾ.ಪಂ.ಸದಸ್ಯ ಜಾವದ್ ಅಹಮ್ಮದ್, ರಾಜೇಂದ್ರ, ರಾಮಾಪುರ ಹನೂರು ಬ್ಲಾಕ್ ಅಧ್ಯಕ್ಷ ಕೆಂಪಯ್ಯ, ಈಶ್ವರ್, ಹನೂರುಯು.ಕಾಂ.ಅಧ್ಯಕ್ಷ ಲೋಕೇಶ್ ಪ್ರಧಾನ ಕಾರ್ಯದರ್ಶಿ ಉದ್ದನೂರು ಸಿದ್ದರಾಜು, ಮುಖಂಡರಾದ ಮಾಜಿ ತಾ.ಪಂ. ಅಧ್ಯಕ್ಷ ಮುರುಡೇಶ್ವರಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ಉ ಪಾಧ್ಯಕ್ಷ ದೇವರಾಜು ರಾಮಲಿಂಗಂ ಇನ್ನಿತರರು ಹಾಜರಿದ್ದರು.







