ಎಸ್ಸೆಸ್ಸೆಫ್‌ನಿಂದ ರಕ್ತ ಶೇಖರಣಾ ಅಭಿಯಾನ
ಬಂಟ್ವಾಳ, ಜು.14: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಹತ್ತು ಆಸ್ಪತ್ರೆ ಕೇಂದ್ರಗಳಲ್ಲಿ ರಕ್ತ ಶೇಖರಣಾ ಅಭಿಯಾನವು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರ ನೇತೃತ್ವದಲ್ಲಿ 10 ಡಿವಿಷನ್‌ಗಳ ಸಹ-ಭಾಗಿತ್ವದೊಂದಿಗೆ ನಡೆಯಲಿರುವುದು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಜು.16 ರಂದು ಬೆಳಗ್ಗೆ ತಾಜುಲ್ ಉಲಮಾ ಸುನ್ನೀ ಸೆಂಟರ್ ದೇರಳಕಟ್ಟೆಯಲ್ಲಿ ನಡೆಯಲಿರುವುದು.
ಜಿಲ್ಲೆಯಲ್ಲಿ ಒಟ್ಟು ಸುಮಾರು 2 ಸಾವಿರ ಯೂನಿಟ್ ರಕ್ತ ಶೇಖರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





