ನೂತನ ಡಿಸಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ
.jpg)
ಹಾಸನ, ಜು.14: ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಡಿಸಿ ಆಗಿ ಕರ್ತವ್ಯನಿರ್ವಹಿಸಿದ ವಿ. ಚೈತ್ರ ಅವರು ವರ್ಗಾವಣೆಗೊಂಡು ಹಿನ್ನಲೆಯಲ್ಲಿ ಅದೆ ಜಾಗಕ್ಕೆ ಮಂಡ್ಯದ ಜಿಪಂ ಸಿಇಓ ರೋಹಿಣಿ ಸಿಂಧೂರಿ ಅವರು ಹಾಸನ ಜಿಲ್ಲಾಧಿಕಾರಿಯಾಗಿ ಶುಕ್ರವಾರ ಬೆಳಿಗ್ಗೆ ಅಧಿಕಾರವಹಿಸಿಕೊಂಡರು.
ಈ ವೇಳೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಮೆಡಿಕಲ್ ಕಾಲೇಜು ನಿರ್ದೇಶಕ ರವಿಕುಮಾರ್, ಆಡಳಿತಾಧಿಕಾರಿ ಚಿದಾನಂದ್, ಜಿಲ್ಲಾ ಸರ್ಜನ್ ಶಂಕರ್, ಹಾಗೂ ರಾಷ್ಟ್ರೀಯ ಪತ್ರಿಕ ಮಹಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ಮದನ್‌ಗೌಡ, ಜಿಲ್ಲಾ ಕಾರ್ಯಕನಿರತ ಪತ್ರಕರ್ತ ಸಂಘ ಅಧ್ಯಕ್ಷ ರವಿನಾಕಲಗೂಡು, ವಿವಿಧ ಸಂಘ ಸಂಸ್ಥೆ ಹಾಗೂ ಇತರರು ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರು.
Next Story





