ಆರು ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜು. 14: ಆರು ಮಂದಿ ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಹೆಸರಿನ ಮುಂದಿನ ಸ್ಥಳಕ್ಕೆ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಎಸ್.ಪಿ.ಕುಲಕರ್ಣಿ-ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಕಾರ್ಯದರ್ಶಿ, ಎಂ.ಆರ್.ಹೀರೆಮಠ್-ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕ-ಬೆಂಗಳೂರು, ಡಾ.ಡಿ.ಆರ್. ಅಶೋಕ್-ಬಿಬಿಎಂಪಿ ಜಂಟಿ ಆಯುಕ್ತ-ಪೂರ್ವ ವಲಯ, ಶಿವಪ್ಪ ಎಲ್ಲಪ್ಪ ಭಜಂತ್ರಿ-ಧಾರವಾಡ ಜಿಲ್ಲೆ ಎನ್‌ಎಚ್‌ಎಐ ವಿಶೇಷ ಭೂಸ್ವಾಧೀನಾಧಿಕಾರಿ.
ಡಿ.ಸಿ.ಶಿವಾನಂದ ಮೂರ್ತಿ-ಮೈಸೂರು ಮಹಾನಗರ ಪಾಲಿಕೆ ವಲಯ ಆಯುಕ್ತರು(ವಲಯ-3) ಹಾಗೂ ಜಯಶ್ರೀ ಶಿಂತ್ರಿ-ಧಾರವಾಡ ಜಿಲ್ಲೆಯ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್ ಕಂಪೆನಿಯ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದೆ.
Next Story





