ಭಿನ್ನಾಭಿಪ್ರಾಯವಿದ್ದರೂ ಟ್ರಂಪ್ ಜೊತೆ ಮಾತುಕತೆ ಮುಖ್ಯ: ಮರ್ಕೆಲ್

ಪ್ಯಾರಿಸ್, ಜು. 14: ಸ್ಪಷ್ಟ ಭಿನ್ನಾಭಿಪ್ರಾಯಗಳಿದ್ದರೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡುತ್ತಾ ಇರುವುದು ಅಗತ್ಯವಾಗಿದೆ ಎಂದು ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಗುರುವಾರ ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಜೊತೆ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮರ್ಕೆಲ್, ಕಳೆದ ವಾರ ನಡೆದ ಜಿ20 ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಒಮ್ಮತಾಭಿಪ್ರಾಯವಿರುವುದು ವ್ಯಕ್ತವಾಯಿತು ಎಂದರು.
‘‘ಆದರೆ, ನಮ್ಮ ನಡುವೆ ಕೆಲವು ವಿಷಯಗಳಲ್ಲಿ ಸ್ಪಷ್ಟ ಭಿನ್ನಾಭಿಪ್ರಾಯಗಳೂ ಇದ್ದವು. ಉದಾಹರಣೆಗೆ, ಪ್ಯಾರಿಸ್ ಹವಾಮಾನ ಒಪ್ಪಂದ ಬೇಕೆ ಬೇಡವೇ ಎನ್ನುವುದರಲ್ಲಿ. ಈ ಭಿನ್ನಾಭಿಪ್ರಾಯಗಳನ್ನು ನಾವು ಇತ್ಯರ್ಥಪಡಿಸಿಲ್ಲ. ಆದರೆ, ನಮ್ಮ ನಡುವಿನ ಸಂಪರ್ಕ, ಮಾತುಕತೆಯನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯ’’ ಎಂದು ಮರ್ಕೆಲ್ ಅಭಿಪ್ರಾಯಪಟ್ಟರು.
Next Story





