ವ್ಯಾಪಾರ ಹೆಚ್ಚಿಸಲು ಈ ಉದ್ಯಮಿ ತನ್ನ 8 ವರ್ಷದ ಪುತ್ರನನ್ನು ಬಳಸಿದ್ದು ಹೇಗೆ ಗೊತ್ತೇ?

ಚೀನಾ, ಜು.14: ವ್ಯಾಪಾರಿಗಳು ತಮ್ಮ ಉದ್ಯಮವನ್ನು ಬೆಳೆಸಲು ವಿವಿಧ ರೀತಿಯ ಕಸರತ್ತು ನಡೆಸುತ್ತಾರೆ. ಜಾಹೀರಾತುಗಳ ಮೊರೆ ಹೋಗುತ್ತಾರೆ. ಆದರೆ ಚೀನಾದಲ್ಲೊಬ್ಬ ಉದ್ಯಮಿ ತನ್ನ ಕಾಲುಚೀಲದ ವ್ಯಾಪಾರದ ಪ್ರಮೋಷನ್ ಗಾಗಿ 8 ವರ್ಷದ ಪುತ್ರನನ್ನೇ ಬಳಸಿಕೊಂಡಿದ್ದಾರೆ. ಅದೂ ಪುತ್ರನನ್ನು ಕಾಲುಚೀಲದೊಳಕ್ಕೆ ಹಾಕುವ ಮೂಲಕ!.
ಕಾಲುಚೀಲದೊಳಕ್ಕೆ ತನ್ನ ಪುತ್ರನನ್ನು ಹಾಕುವ ಆತ “ಗುಣಮಟ್ಟ ಹೇಗಿದೆ?” ಎಂದು ಪ್ರಶ್ನಿಸುತ್ತಾನೆ. ನಂತರ ಕಾಲುಚೀಲದ ಗುಣಮಟ್ಟ ಪರೀಕ್ಷಿಸಲು ಕಾಲು ಚೀಲವನ್ನು ಮೇಲೆ ಕೆಳಗ್ಗೆ ಜಗ್ಗುತ್ತಾನೆ. ತನ್ನ ಕಾಲುಚೀಲ ಭಾರವನ್ನೂ ತಡೆದುಕೊಳ್ಳುತ್ತದೆ ಎಂದು ಈ ಮೂಲಕ ಆತ ಹೇಳಿದ್ದಾನೆ.
ಈ ವಿಡಿಯೋ ಚೈನೀಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಆತನನ್ನು ಚೆಂಗ್ ಎಂದು ಗುರುತಿಸಲಾಗಿದೆ. “ಇಂದಿನ ದಿನಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಲು ಕಷ್ಟವಾಗುತ್ತಿರುವುದರಿಂದ ಈ ತಂತ್ರ ನಡೆಸಿದ್ದಾಗಿ” ಆತ ಹೇಳಿದ್ದಾನೆ ಎನ್ನಲಾಗಿದೆ.
Next Story





