ಗಂಗಾನದಿಗೆ 7,000 ಕೋ.ರೂ. ವೆಚ್ಚ: ಏನೂ ಅಭಿವೃದ್ಧಿ ಇಲ್ಲ; ಕೇಂದ್ರ ಹಸಿರು ನ್ಯಾಯ ಮಂಡಳಿ

ಹೊಸದಿಲ್ಲಿ, ಜು. 14: ಈಗಲೂ ಗಂಭೀರ ಪರಿಸರ ಸಮಸ್ಯೆಯಾಗಿರುವ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರಕಾರ 7 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇಂದು ಹೇಳಿದೆ.
ಗಂಗಾ ನದಿಯ ತೀರದ 100 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿರುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ರಾಷ್ಟ್ರೀಯ ನ್ಯಾಯ ಮಂಡಳಿ ನಿನ್ನೆ ನೀಡಿತ್ತು. ನದಿಯ 500 ಮೀಟರ್ ಒಳಗಡೆ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಿ ಹಾಗೂ ತಪ್ಪೆಸಗಿದವರಿಗೆ 50 ಸಾವಿರ ದಂಡ ವಿಧಿಸುವಂತೆ ತಿಳಿಸಿತ್ತು.
2015ರಿಂದ 2020ರವರೆಗೆ 5 ವರ್ಷದ ಈ ಯೋಜನೆಗೆ 20 ಸಾವಿರ ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ಘೋಷಿಸಿದ್ದರು. ಇದರ ಹೊರತಾಗಿ ಇಂದು ಕೂಡ ಗಣನೀಯ ಪ್ರಮಾಣದ ಉಪಯೋಗಿಸದ ನಿಧಿ ಇದೆ ಎಂದು ಅದು ಹೇಳಿದೆ.
ಕೇಂದ್ರ ಸರಕಾರ, ರಾಜ್ಯ ಸರಕಾರ, ಉತ್ತರಪ್ರದೇಶದ ಸ್ಥಳೀಯಾಡಳಿತ 2017ರ ವರೆಗೆ ಇದುವರೆಗೆ 7304.64 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಆದರೆ, ಗಂಗಾನದಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಇದು ಹೀಗೆ ಮುಂದುವರಿದರೆ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ಕೇಂದ್ರ ಹಸಿರು ನ್ಯಾಯ ಮಂಡಳಿ ಹೇಳಿದೆ.







