ಆಳ್ವಾಸ್‌ನಲ್ಲಿ ಪತ್ರಿಕಾ ದಿನಾಚರಣೆ
.jpg)
ಮೂಡುಬಿದಿರೆ, ಜು. 14: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ಆಳ್ವಾಸ್ ಎಂಸಿಜೆ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇರಳಕಟ್ಟೆ ಯನಪೋಯ ಯುನಿವರ್ಸಿಟಿಯ ಉಪನ್ಯಾಸಕಿ ಸಚಿತಾ ನಂದಗೋಪಾಲ್ ಮುಖ್ಯ ಅತಿಥಿಯಾಗಿ ಭಾಗಹಿಸಿದರು.
ಮಾಧ್ಯಮ ಜವಾಬ್ದಾರಿಯುತ ಕ್ಷೇತ್ರ. ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯನ್ನು ಅರಿತು ಸತ್ಯಾಂಶವನ್ನು ವರದಿ ಮಾಡಬೇಕು. ಜವಾಬ್ದಾರಿಯುತ ಪತ್ರಕರ್ತನಾಗುವುದು ಮಾತ್ರವಲ್ಲದೆ, ಉತ್ತಮ ಪ್ರಜೆಯಾಗಿಯೂ ಯುವಜನರು ಮುಂದೆ ಬರಬೇಕು ಎಂದರು. ಮೂಡುಬಿದಿರೆಯ ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ್ ಆಚಾರ್ಯ ಮುಖ್ಯ ಅತಿಥಿಯಾಗಿ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮ ವೈಶಿಷ್ಟ್ಯವನ್ನು ಅರಿಯುವುದರೊಂದಿಗೆ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್ ಮಾತನಾಡಿ, ಪತ್ರಿಕೊದ್ಯಮದಲ್ಲಿ ವಿದ್ಯಾರ್ಥಿಗಳು ಏನಾದರು ಸಾಧಿಸಿದರೆ ಇತಿಹಾಸವನ್ನು ಸೃಷ್ಟಿಸುವಂತೆ ಇರಬೇಕು.ಭಾವನೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡುವಂತಾಗಬೇಕು. ಓದುವಿಕೆ, ಯೋಚನೆ, ಚರ್ಚೆ, ಸ್ಪಷ್ಟತೆ ಗುಣಗಳಿದ್ದರೆ ಹೊಂದಿರುವುದರಿಂದ ಒಳ್ಳೆಯ ಪರ್ತಕರ್ತನಾಗಲು ಸಾಧ್ಯ ಎಂದು ಎಂದರು.
ಆಳ್ವಾಸ್ ಪತ್ರಿಕೋದ್ಯಮದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಗಳಾದ ಸುದ್ದಿಮನೆ, ಆಳ್ವಾಸ್ ವಿಶನ್, ಆಳ್ವಾಸ್ ಮಿರರ್, ಆಳ್ವಾಸ್ ಮಾಧ್ಯಮ ಬಿಡುಗೊಡೆಗೊಳಸಲಾಯಿತು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮೂಹಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ರಾಮ್, ಆಳ್ವಾಸ್ ಪದವಿ ಪತ್ರಕೋದ್ಯಮ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಉಪಸ್ಥಿತರಿದ್ದರು.







