ಮಹಿಳೆಗೆ ಕಾರು ಢಿಕ್ಕಿ
ಮಂಗಳೂರು, ಜು.14: ಕಾವೂರಿನ ಸುರೇಶ್ ಸುವರ್ಣ ಎಂಬವ ಪತ್ನಿ ಧನಲಕ್ಷ್ಮೀ ಎಂಬವರು ತನ್ನ ಮನೆಯಿಂದ ಕಾವೂರು ಜಂಕ್ಷನ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದಿದೆ.
ಆರೋಪಿ ಕಾರು ಚಾಲಕ ನಿಂಗಪ್ಪ ದೇವಪ್ಪ ಎಂಬಾತ ಕಾರನ್ನು ಹಠಾತ್ ಆಗಿ ಹಿಂದಕ್ಕೆ ಚಲಾಯಿಸಿದ ಪರಿಣಾಮ ಧನಲಕ್ಷ್ಮೀ ಅವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





