ಅಂಬೇಡ್ಕರ್‌ಗೆ ಗೌರವ ನಮನ ಕಾರ್ಯಕ್ರಮ

ಉಡುಪಿ, ಜು.14: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ವರ್ಷಾಚರಣೆ ಅಂಗವಾಗಿ ಇದೇ ಜು.20ರಂದು ‘ಡಾ.ಬಿ.ಆರ್. ಅಂಬೇಡ್ಕರ್-126 , ತಮಗಿದೋ ನಮ್ಮ ಗೌರವ ನಮನ’ ಕಾರ್ಯಕ್ರಮವನ್ನು ಉಡುಪಿಯ ನಾರಾಯಣ ಗುರುಸಭಾ ಭವನದಲ್ಲಿ ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಮುಖ್ಯ ವಾಗಿ ಗಮನದಲ್ಲಿಟ್ಟುಕೊಂಡು, ದಲಿತ ಆಸ್ಮಿತೆಯನ್ನು ಉಳಿಸಿಕೊಂಡು , ಇಡೀ ಜನತೆಯನ್ನು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ , ವಿವಿಧ ಕಲಾವಿದರಿಂದ ಹೋರಾಟದ ಹಾಡುಗಳು, ಪ್ರಗತಿ ಪರ ಹಾಡುಗಳು , ಸ್ಥಳೀಯ ಜಾನಪದ ಕಲೆಗಳ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮ ಮತ್ತು ಚರ್ಮವಾದ್ಯ ಕಲಾವಿದರಿಂದ ಚರ್ಮವಾದ್ಯ ಮೇಳ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮ ಏರ್ಪಡಿಸುವ ಕುರಿತಂತೆ ಹಾಗೂ ಕಲಾವಿದರ ಆಯ್ಕೆ ಮಾಡುವಂತೆ ಹಾಗೂ ಉಪನ್ಯಾಸ ನೀಡುವ ಕುರಿತು ಆಯ್ಕೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಹಾಗೂ ಕಾರ್ಯಕ್ರಮದ ಬಗ್ಗೆ ಜಿಲ್ಲೆಯ ಎಲ್ಲಾ ಯುವಕ ಮಂಡಲಗಳಿಗೆ ಮಾಹಿತಿ ನೀಡಿ , ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ವ್ಯವಸ್ಥೆ ಮಾಡುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ದಲಿತ ಮುಖಂಡರಾದ ಉದ್ ಕುಮಾರ್ ತಲ್ಲೂರು,ವಿಜ್ ಮತಿತಿತರರು ಉಪಸ್ಥಿತರಿದ್ದರು.





