ಮಕ್ಕಳ ಚಿತ್ರಕಲೆ ನಿರ್ಲಕ್ಷ ಸಲ್ಲ: ಎಂ.ಎಸ್.ಮೂರ್ತಿ
ಬೆಂಗಳೂರು, ಜು.15: ನಮ್ಮ ಸಮಾಜದಲ್ಲಿ ಮಕ್ಕಳ ಚಿತ್ರಕಲೆಯನ್ನು ನಿರ್ಲಕ್ಷಿಸುವ ಮೂಲಕ ಸೃಜನಾತ್ಮಕತೆಯನ್ನು ಮೊಳಕೆಯಲ್ಲಿಯೇ ಚಿವುಟುವ ಪ್ರಯತ್ನ ನಿರಂತರವಾಗಿದೆ ಎಂದು ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಬಾಲ ಭವನ ಸೊಸೈಟಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ನಗರದ ಕಬ್ಬನ್ ಉದ್ಯಾನವನದಲ್ಲಿ 9ರಿಂದ 16ವರ್ಷದ ಸರಕಾರಿ ಶಾಲೆ ಹಾಗೂ ಸೌಲಭ್ಯ ವಂಚಿತ ಮಕ್ಕಳಿಗೆ ಆಯೋಜಿಸಿದ್ದ ‘ಕಂಸಾಳೆ-ಪಟ್ಟದ ಕುಣಿತ’, ‘ಜೇಡಿ ಮಣ್ಣಿನ ರಸಗ್ರಹಣ’ ಹಾಗೂ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಅಕ್ಷರ ಕಲಿಯುವುದಕ್ಕೂ ಮೊದಲೇ ಚಿತ್ರಕಲೆಯ ಮೂಲಕ ಶಿಕ್ಷಣವನ್ನು ಕಲಿಯಲು ಪ್ರಾರಂಭಿಸುತ್ತಾರೆ. ಆದರೆ, ಪೋಷಕರು ಮಕ್ಕಳು ಬಿಡಿಸುವ ಚಿತ್ರಕಲೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೆ, ಮಕ್ಕಳನ್ನು ನಿಂದಿಸಿ, ಚಿತ್ರಕಲೆಯನ್ನು ನಾಶ ಮಾಡುತ್ತಾರೆ. ಆ ಮೂಲಕ ಮಕ್ಕಳ ಸೃಜನಾತ್ಮಕತೆಯನ್ನು ಮೊಳಕೆಯಲ್ಲಿಯೇ ಮೊಟಕುಗೊಳಿಸುತ್ತಾರೆ ಎಂದು ಅವರು ವಿಷಾದಿಸಿದರು.
ಇತ್ತೀಚಿನ ದಿನಗಳಲ್ಲಿ ಟಿವಿಗಳಲ್ಲಿ ಮಕ್ಕಳ ರಿಯಾಲಿಟಿ ಶೋಗಳ ಹಾವಳಿ ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಹೇಗಾದರು ರಿಯಾಲಿಟಿ ಶೋಗಳಲ್ಲಿ ಸೇರಿಸಲು ಹರಸಾಹಸ ಪಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ವಿನಾಕಾರಣ ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಹಾಗೂ ಪೋಷಕರ ಸಮಯ ಹಾಗೂ ಹಣವು ವ್ಯರ್ಥ್ಯವಾಗುತ್ತಿದೆ. ಆದರೆ, ಇಂತಹ ರಿಯಾಲಿಟಿ ಶೋಗಳಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಪೋಷಕರು ತಮ್ಮ ಮಕ್ಕಳನ್ನು ಟಿವಿಯಲ್ಲಿ ಕಾಣುವುದಕ್ಕಿಂತ ಬಯಲಿನಲ್ಲಿ ಹಾಗೂ ಪ್ರಕೃತಿಯ ಮಡಿಲಿನಲ್ಲಿ ಕಾಣುವುದು ಲೇಸು. ಪ್ರಕೃತಿಯ ಸೊಬಗು, ನಿಗೂಢತೆಗಳನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಆಗ ಮಕ್ಕಳಲ್ಲಿ ಸ್ವಂತಿಕೆ, ಸೃಜನಾತ್ಮಕತೆ ಬೆಳೆಯಲು ಸಾಧ್ಯವಾಗುತ್ತದೆ ಅವರು ತಿಳಿಸಿದರು. ಮಕ್ಕಳು ಹಾಗೂ ಪೋಷಕರ ನಡುವೆ ಅನ್ಯೋನ್ಯತೆ ಇರಬೇಕು. ಮಕ್ಕಳು ತಮ್ಮ ಮನಸಿನಲ್ಲಿರುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವನ್ನು ನಿರ್ಮಿಸಬೇಕು. ಆಗ ಮಕ್ಕಳಲ್ಲಿರುವ ಗೊಂದಲ ರೂಪದಲ್ಲಿರುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಬಾಲ ಭವನ ಸೊಸೈಟಿಯ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನಗರ ಪ್ರದೇಶದ ಮಕ್ಕಳಿಗೆ ಸಿಗುವಷ್ಟು ಅವಕಾಶಗಳು ಗ್ರಾಮೀಣ ಮಕ್ಕಳಿಗೆ ಸಿಗುತ್ತಿಲ್ಲ. ಹೀಗಾಗಿ ಗ್ರಾಮೀಣ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಅವಕಾಶ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿರುವ ಮಕ್ಕಳಿಗೆ ಕಾರ್ಯಾಗಾರಗಳನ್ನು ಹಮ್ಕಿಕೊಳ್ಳಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸರಕಾರ ಇದಕ್ಕೆ ಅಗತ್ಯವಾದ ಅನುದಾನವನ್ನು ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಬಾಲ ಭವನ ಸಮಿತಿಯ ಸದಸ್ಯರಾದ ಪಾರ್ವತಿ, ಪಾರ್ವತಮ್ಮ, ಗೋಪಾಲ ಮಂಜಪ್ಪ ಹಾಗೂ ಬಾಲ ಭವನ ಸೊಸೈಟಿಯ ಕಾರ್ಯದರ್ಶಿ ದಿವ್ಯಾ ನಾರಾಯಣಪ್ಪ ಮತ್ತಿತರರಿದ್ದರು.
ಜು.17ರಿಂದ ಕ್ಷಯ ರೋಗ ಪತ್ತೆಗಾಗಿ ಆಂದೋಲನಬೆಂಗಳೂರು, ಜು.15: ಕ್ಷಯ ರೋಗ ಪ್ರಕರಣಗಳ ಪತ್ತೆಗಾಗಿ ಜು.17 ರಿಂದ ಜು.31ರವರೆಗೆ ಮನೆ ಮನೆ ಭೇಟಿ ಆಂದೋಲನ ನಡೆಸಲು ಜಿಲ್ಲಾ ಕ್ಷಯ ರೋಗ ನಿಯಂತ್ರಣಾ ಕೇಂದ್ರ ನಿರ್ಧರಿಸಿದೆ. ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಆಂದೋಲನಕ್ಕೆ ಪೂರ್ವಭಾವಿಯಾಗಿ 120 ವೈದ್ಯಾಧಿಕಾರಿಗಳಿಗೆ 546 ಆಶಾ ಕಾರ್ಯಕರ್ತೆಯರಿಗೆ ಹಾಗೂ 215 ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.ಕೊಳಚೆ ಪ್ರದೇಶಗಳು, ಕಾರಾಗೃಹ, ವೃದ್ಧಾಪ್ಯ ಕೇಂದ್ರಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತ ಶಿಬಿರಗಳು, ರಾತ್ರಿ ಆಶ್ರಯಗಳು, ಎಚ್‌ಐವಿ ಪೀಡಿತರು, ವಸತಿ ರಹಿತರು, ಬೀದಿ ಮಕ್ಕಳು, ಅನಾಥಾಶ್ರಮಗಳು, ನಿರ್ಗತಿಕ ವಸತಿಗಳು ಹಾಗೂ ರಕ್ಷಣಾಲಯಗಳಲ್ಲಿ ಈ ತಪಾಸಣಾ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.ಪ್ರತಿ ಮನೆ ಮನೆಗೆ ತೆರಳಿ ಕ್ಷಯ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಂದ ಕಫ ಪರೀಕ್ಷೆ ಮಾಡಲಾಗುವುದು. ಈ ವೇಳೆ ಕ್ಷಯ ರೋಗ ಇರುವುದು ಖಾತರಿಯಾದರೆ ಕೂಡಲೆ ಅವರಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ವರ್ಷ 4,041 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 3,338 ರೋಗಿಗಳು ಕ್ಷಯದಿಂದ ಗುಣಮುಖರಾಗಿದ್ದಾರೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಹೆಚ್ಚು ಜ್ವರ, ಗಣನೀಯ ತೂಕದ ನಷ್ಟ, ಕಫದಲ್ಲಿ ರಕ್ತ ಬೀಳುವುದು, ಕಳೆದ ಒಂದು ತಿಂಗಳಿನಿಂದ ಎದೆನೋವು, ರೋಗದ ಪ್ರಮುಖ ಲಕ್ಷಣಗಳಾಗಿವೆ ಎಂದರು.ಒಂದು ತಂಡದಲ್ಲಿ ಇಬ್ಬರಂತೆ 248 ತಂಡಗಳನ್ನು ರಚಿಸಲಾಗಿದೆ. 200 ಆರೋಗ್ಯ ಕಾರ್ಯಕರ್ತರು, 296 ಆಶಾ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ತಪಾಸಣೆ ಮೂಲಕ ಕ್ಷಯರೋಗವನ್ನು ಪತ್ತೆಹಚ್ಚಿ ಅಂದಿನಿಂದಲೇ ಚಿಕಿತ್ಸೆಯನ್ನು ಆರಂಭಿಸಲಿದ್ದಾರೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ರಮೇಶ್ ಬಾಬು, ಡಾ. ಸುನಂದ, ಡಾ.ನದೀಫ್, ಡಾ.ಮಮತಾ ಸೇರಿದಂತೆ ಇತರರು ಇದ್ದರು.ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ರಾಜ್ಯಗಳ ಒಗ್ಗಟ್ಟಿಗೆ ಕರೆಬೆಂಗಳೂರು, ಜು. 15: ಪ್ರಾದೇಶಿಕ ಭಾಷೆಯ ಉಳಿವಿಗಾಗಿ ಹಾಗೂ ರಾಜ್ಯಗಳ ಸ್ವಾಯತ್ತತೆ ಕಾಪಾಡಲು ವೈಮನಸ್ಸು ಬದಿಗಿಟ್ಟು ಎಲ್ಲಾ ರಾಜ್ಯಗಳು ಒಗ್ಗೂಡಬೇಕು ಎಂದು ಕನ್ನಡ ಪರ ಹೋರಾಟಗಾರರು, ಚಿಂತಕರು, ಸಾಹಿತಿಗಳು ಕರೆ ನೀಡಿದ್ದಾರೆ.ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭಾರತ ಒಕ್ಕೂಟದಲ್ಲಿ ಭಾಷಾ ಸಮಾನತೆಗೆ ಒತ್ತಾಯಿಸಿ ಹಾಗೂ ನಮ್ಮ ಮೆಟ್ರೋ ಹಿಂದಿ ಹೇರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ರಕ್ಷಣೆಗೆ ಒಗ್ಗಟಿನ ತಂತ್ರಕ್ಕೆ ಮಣೆ ಹಾಕಲಾಯಿತು.ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪಮಾತನಾಡಿ, ಹಿಂದಿ ವಿರುದ್ಧ ಹೋರಾಟ ಎಂದರೆ ರಾಜ್ಯದ ಮೇಲಿರುವ ಹಕ್ಕುಗಳ ಪ್ರಶ್ನೆ. ಹೀಗಾಗಿ, ಭಾಷೆ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಕೇಂದ್ರದಲ್ಲಿ ಯಾವುದೇ ಪಕ್ಷ ಸರಕಾರದ ಯಂತ್ರವನ್ನು ಮುನ್ನಡೆಸಲು ಬಂದಾಗ ಭಾಷೆ, ಧರ್ಮ, ಶಿಕ್ಷಣದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇತ್ತೀಚಿಗೆ ಬಂದಿರುವ ಏಕರೂಪ ತೆರಿಗೆ ಜಿಎಸ್‌ಟಿ ಜಾರಿಯಿಂದಲೂ ಜನರ ಆರ್ಥಿಕ ಹಕ್ಕು ಕಸಿದುಕೊಳ್ಳುವ ಹುನ್ನಾರ ಅಡಗಿದೆ ಎಂದು ಗಂಭೀರವಾಗಿ ಆರೋಪಿಸಿದರು.ಸಂವಿಧಾನದಲ್ಲಿ ಪ್ರತಿ ಭಾಷೆಗೂ ಒಂದೇ ಸ್ಥಾನ ನೀಡಲಾಗಿದೆ. ಎಲ್ಲಿಯೂ ಹಿಂದಿ ರಾಷ್ಟ್ರ ಭಾಷೆ ಎಂದಿಲ್ಲ. ಹೊಸ ತಂತ್ರಜ್ಞಾನದಿಂದಲೂ ಸ್ಥಳೀಯ ಭಾಷೆಗಳು ನಾಶ ಆಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಭಾಷೆ ವಿಷಯದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಒಂದಾಗಬೇಕು. ತಮಿಳುನಾಡು ಮಾದರಿಯಲ್ಲಿಯೇ ಕನ್ನಡ ಭಾಷಾ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯನಾರಾಯಣಗೌಡ ಮಾತನಾಡಿ, ಕೇಂದ್ರ ಸರಕಾರದ ಹಿಂದಿ ಹೇರಿಕೆ ವಿರುದ್ಧ ಹದಿನೇಳು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಅದೇ ರೀತಿ, ಈಗಾಗಲೇ, ಪ್ರಾದೇಶಿಕ ಭಾಷಾ ರಾಜ್ಯಗಳ ಮುಂಖಡರಿಗೆ ಪತ್ರ ಬರೆದು ಭಾಷಾ ಸಮಾನತೆಗಾಗಿ ಒತ್ತಾಯಿಸಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.ನಮ್ಮ ಮೆಟ್ರೋ ಎಂಬುದು ಬಿಎಂಟಿಸಿ ಇದ್ದ ಹಾಗೆಯೇ ಒಂದು ನಗರ ಸಾರಿಗೆ.ಅದು ಭಾರತೀಯ ರೈಲ್ವೆಗೆ ಸೇರಿದ ಸಂಸ್ಥೆಯಲ್ಲ ಎಂದ ಅವರು, ನಮ್ಮ ಮೆಟ್ರೋ ಯೋಜನೆಗೆ ರಾಜ್ಯ ಸರಕಾರ ಶ್ಯೂರಿಟಿ ನೀಡಿದೆ. ಹೀಗಾಗಿ, ಇದರಲ್ಲಿ ಅನಗತ್ಯ ಭಾಷೆ ಹೇರಿಕೆ ಸರಿಯಲ್ಲ ಎಂದು ತಿಳಿಸಿದರು.ಸಭೆಯಲ್ಲಿ ಕೂಡಲ ಸಂಗಮದ ಪಂಚಮಶಾಲಿ ಗುರು ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ, ದಲಿತ ಕವಿ ಡಾ.ಸಿದ್ದಲಿಂಗಯ್ಯ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಚಿಂತಕರಾದ ಸಿ.ಎಸ್.ದ್ವಾರಕಾನಾಥ್, ನಾಡೋಜ ಕಮಲಾ ಹಂಪನಾ, ನಟ ಚೇತನ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇತರರು ಇದ್ದರು.ಫೋಟೋ ಇದೆ....ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆಬೆಂಗಳೂರು, ಜು. 15: ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕ ದಲಿತರು ಮತ್ತು ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆ ಹಾಗೂ ದೌರ್ಜನ್ಯ ಖಂಡಿಸಿ ದಲಿತ ಮತ್ತು ಮೈನಾರಿಟಿ ಸೇನೆಯ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.ಶನಿವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎ.ಜೆ.ಖಾನ್ ಮಾತನಾಡಿ, ಗೋ ರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ಅಮಾಯಕರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದರು ಕೇಂದ್ರ ಸರಕಾರ ಕಣ್ಮುಚ್ಚಿ ಕುಳಿತಿದೆ. ದೇಶದಲ್ಲಿ ಕೋಮುಶಕ್ತಿಗಳಿಗೆ ಕೇಂದ್ರ ಸರಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿ ಕಾರಿದರು.ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ದಲಿತರಿಗೆ ಮತ್ತು ಮುಸ್ಲಿಮರಿಗೆ ಸುರಕ್ಷತೆ ಇಲ್ಲದಂತಾಗಿದೆ. ತಳ ಸಮುದಾಯದ ರಕ್ಷಣೆಗೆ ಒತ್ತು ನೀಡುವ ಬದಲು ದೇಶದಲ್ಲಿ ಶಾಂತಿ ಭಂಗ ತರುತ್ತಿರುವ ಕೋಮುಶಕ್ತಿಗಳಿಗೆ ಬಲ ತುಂಬುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ದೇಶದಲ್ಲಿ ಸಂವಿಧಾನ ಮತ್ತು ಕಾನೂನನ್ನು ಲೆಕ್ಕಿಸದೆ ನೈತಿಕ ಪೊಲೀಸ್‌ಗಿರಿಯನ್ನು ಹಾಗೂ ಕಾನೂನು ಕೈಗೆತ್ತಿಕೊಳ್ಳುತ್ತಿರುವ ಸಮಾಜ ಘಾತುಕರ ವಿರುದ್ಧ ಕೂಡಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ದಲಿತ ಸಂಘಟನೆಯ ಮುಖ್ಯಸ್ಥ ಸಿ.ಎಸ್.ರಘು ಮಾತನಾಡಿ, ದೇಶದಲ್ಲಿ ಆಹಾರದ ಹಕ್ಕನ್ನು ಕಸಿದುಕೊಳ್ಳಲು ಕೇಂದ್ರ ಸರಕಾರ ಮುಂದಾಗಿರುವುದು ಸರಿಯಲ್ಲ. ಗೋ ಹತ್ಯೆ ನಿಷೇಧ ಮಸೂದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಅಯ್ಯಪ್ಪ, ಯುವ ಸಂಘಟನೆಯ ಅಧ್ಯಕ್ಷ ಖಾಲಿದ್ ಖಾನ್ ಸೇರಿದಂತೆ ಇತರರು ಇದ್ದರು.ಫೋಟೋ ಇದೆ..ಪರಧರ್ಮ ಸಹಿಷ್ಣುತೆ ಶಾಂತಿಯ ದ್ಯೋತಕ: ವೌಲಿ ಮುನಾವರ್ ಹುಸೈನ್‌ಬೆಂಗಳೂರು, ಜು. 15: ಅನ್ಯ ಧರ್ಮಿಯರ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಪರಧರ್ಮ ಸಹಿಷ್ಣುತೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡಬಹುದು ಎಂದು ನಗರದ ರೆಹಮಾನ್ ಮಸ್ಜೀದ್‌ನ ವೌಲಿ ಮುನಾವರ್ ಹುಸೈನ್ ಅಭಿಪ್ರಾಯಪಟ್ಟಿದ್ದಾರೆ.ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಲೇಖಕ ಮೋಹನ್ ಅವರ ಆಂಗ್ಲ ಭಾಷೆಯ ‘ವಿಶ್ವಗುರು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ವಿಶ್ವದ ಎಲ್ಲ ಧರ್ಮಗಳು ಶಾಂತಿ ಮತ್ತು ನೆಮ್ಮದಿಯನ್ನು ಪ್ರತಿಪಾದಿಸುತ್ತವೆ. ಮಾನವನ ಒಳಿತಿಗಾಗಿ ಎಲ್ಲ ಧರ್ಮಗಳು ರೂಪಿತಗೊಂಡಿವೆ. ಇದನ್ನು ಅರಿತು ಅನ್ಯ ಧರ್ಮಿಯರ ಜೊತೆ ಹೊಂದಾಣಿಕೆಯ ಜೀವನದಿಂದ ಶಾಂತಿ ನೆಲೆಸಲಿದೆ ಎಂದು ತಿಳಿಸಿದರು.ಭಗವಂತ ಹಾಗೂ ಸೃಷ್ಟಿಯ ರಹಸ್ಯ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಕೃತಿಯಲ್ಲಿ ಎಲ್ಲ ಧರ್ಮಗಳ ಶಾಂತಿ ರೂಪಕವಾಗಿದೆ. ಪ್ರತಿಯೊಬ್ಬರು ಈ ಪುಸ್ತಕವನ್ನು ಓದುಬೇಕು ಎಂದು ತಿಳಿಸಿದರು.ವಿದ್ವಾಂಸ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ವಿಶ್ವದ ಎಲ್ಲ ಹಿಂದೂಗಳು, ಯಹೂದಿಗಳು, ಕ್ರಿಶ್ಚಿಯನ್ನರು, ಮುಸ್ಲಿಮರು, ಬೌದ್ಧರು, ಭಗವಂತನ ರಹಸ್ಯವನ್ನು ಯಾರಾದರೂ ತಿಳಿಸುವರೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಕಾತರಕ್ಕೆ ಈ ಕೃತಿ ಪರಿಹಾರವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ, ಸ್ಟೀಫನ್ ಚರ್ಚ್‌ನ ಮನೋಹರ್ ಚಂದ್ರಪ್ರಸಾದ್, ಬರಹಗಾರ ಎಂ.ವಿ. ತ್ಯಾಗರಾಜ್, ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಾಗೀರ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಪ್ರಯಾಣ ಭತ್ತೆ ದುರ್ಬಳಕೆ ಆರೋಪ‘ಹಕ್ಕುಚ್ಯುತಿ’ ಮಂಡಿಸಲು ಪರಿಷತ್ ಸದಸ್ಯರ ಕೋರಿಕೆ: ಸಭಾಪತಿ ಶಂಕರಮೂರ್ತಿಬೆಂಗಳೂರು, ಜು. 15: ಪ್ರಯಾಣ ಭತ್ತೆ ದುರ್ಬಳಕೆ ಪ್ರಕರಣ ಸಂಬಂಧ ‘ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ’ ಎಂದು 8 ಮಂದಿ ಪರಿಷತ್ ಸದಸ್ಯರು ದೂರು ನೀಡಿರುವ ಪದ್ಮನಾಭರೆಡ್ಡಿ ವಿರುದ್ಧ ‘ಹಕ್ಕುಚ್ಯುತಿ’ ಮಂಡನೆಗೆ ಅವಕಾಶ ಕೋರಿದ್ದಾರೆಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.ಶನಿವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಯಾಣ ಭತ್ತೆ ದುರ್ಬಳಕೆ ಸಂಬಂಧದ ದೂರಿನ ಹಿನ್ನೆಲೆಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಸೇರಿದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು.ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮೇಲ್ಮನೆ ಸದಸ್ಯರಾದ ಮನೋಹರ್, ರಘು ಆಚಾರ್, ಆರ್.ಬಿ.ತಿಮ್ಮಾಪುರ್, ಎಂ.ಡಿ.ಲಕ್ಷ್ಮಿನಾರಾಯಣ್, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಎನ್.ಎಸ್.ಬೋಸರಾಜ್ ಸೇರಿದಂತೆ ಎಂಟು ಮಂದಿಯ ವಿರುದ್ಧ ದೂರು ನೀಡಿದ್ದಾರೆ.ಮೇಲ್ಕಂಡ 8 ಮಂದಿ ಸದಸ್ಯರು ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಿಳಾಸ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ಕ್ಷೇತ್ರಗಳಿಂದಲೂ ಪ್ರಯಾಣ ಭತ್ತೆಯನ್ನು ಪಡೆದಿದ್ದಾರೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ. ಆದುದರಿಂದ ಕ್ರಮ ಕೈಗೊಳ್ಳಬೇಕೆಂದು ಪದ್ಮನಾಭರೆಡ್ಡಿ ದೂರು ನೀಡಿದ್ದರು.ಆ ಹಿನ್ನೆಲೆಯಲ್ಲಿ ದೂರನ್ನು ಆಧರಿಸಿ ಎಂಟು ಮಂದಿ ಸದಸ್ಯರಿಗೆ ಪತ್ರ ಬರೆದಿದ್ದೆ. ಅವರು ಕಾಲಾವಕಾಶ ಕೋರಿದ್ದರು. ಆ ಬಳಿಕ ಎಂಟು ಮಂದಿಯೂ ಲಿಖಿತ ಉತ್ತರ ನೀಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪದ್ಮನಾಭರೆಡ್ಡಿ ತಮ್ಮ ವಿರುದ್ಧ ಸುಳ್ಳು ದೂರು ನೀಡಿ ‘ಹಕ್ಕುಚ್ಯುತಿ’ಯನ್ನುಂಟು ಮಾಡಿದ್ದು ಮೇಲ್ಮನೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಅವಕಾಶ ಕೋರಿ ಮನವಿ ಮಾಡಿದ್ದಾರೆ ಎಂದು ವಿವರ ನೀಡಿದರು.ವಿಳಾಸ ಬದಲಾವಣೆ ನಂತರ ಸ್ವಕ್ಷೇತ್ರದಿಂದ ಪ್ರಯಾಣ ಭತ್ತೆ ಪಡೆದಿರುವುದು ಕಾನೂನಾತ್ಮಕವಾಗಿ ಸರಿ ಇರಬಹುದು. ಆದರೆ, ನೈತಿಕವಾಗಿ ತಪ್ಪಿದೆ. ತಾವು ಬಳಸಿರುವ ಪ್ರಯಾಣ ಭತ್ತೆ ವಾಪಸ್ ಮಾಡುತ್ತೇವೆ ಎಂದು 8ಮಂದಿ ವಾದ ಮಂಡಿಸುವ ಜಿಜ್ಞಾಸೆ ಇದೆ. ಈ ಪ್ರಕರಣ ಅತ್ಯಂತ ಸೂಕ್ಷ್ಮ-ಸಂಕೀರ್ಣ. ಹೀಗಾಗಿ ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.ಬಾಕ್ಸ್‌ಆಂಧ್ರದ ರಾಜ್ಯಪಾಲರಾಗಿ ಮೂರ್ತಿ?ರಾಷ್ಟ್ರಪತಿ ಚುನಾವಣೆ ಬಳಿಕ ರಾಜ್ಯಪಾಲ ಹುದ್ದೆ ಸಂಬಂಧ ಹೊಸದಿಲ್ಲಿ ನಾಯಕರು ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ತಮ್ಮನ್ನು ಆಂಧ್ರ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಎಂದು ಸುದ್ದಿ ಬಿತ್ತರವಾಗಿದ್ದು, ಇದರಲ್ಲಿ ಭಾಗಶಃ ಸತ್ಯಾಂಶವಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.ಕೈದಿಗಳಿಗೆ ‘ರೇವು ಪಾರ್ಟಿ ಭಾಗ್ಯ’ ಕಲ್ಪಿಸಿ:ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬೇಡಿಕೆಬೆಂಗಳೂರು, ಜು. 15: ರಾಜ್ಯದ ಜನತೆಗೆ ಹಲವು ‘ಭಾಗ್ಯ’ಗಳನ್ನು ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾರಾಗೃಹ ಬಂಧಿ ಹಾಗೂ ಕೈದಿಗಳಿಗೆ ಇಸ್ಪೀಟ್, ಮದ್ಯ, ಮಾದಕ ದ್ರವ್ಯಗಳು ಹಾಗೂ ರೇವು ಪಾರ್ಟಿಯ ಭಾಗ್ಯಗಳನ್ನು ಕಲ್ಪಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿ ಮದ್ಯ, ಮಾದಕ ದ್ರವ್ಯಗಳು ರಾಜಾರೋಷವಾಗಿ ಪೂರೈಕೆಯಾಗುತ್ತಿದ್ದು, ಕಾರಾಗೃಹಗಳು ಒಂದು ರೀತಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗಳಾಗಿ ಮಾರ್ಪಟ್ಟಿವೆ ಎಂದು ಟೀಕಿಸಿದರು.ನ್ಯಾಯಾಂಗ ತನಿಖೆ:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ಹೈಕೋರ್ಟಿನ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದ ಅವರು, ಶಶಿಕಲಾಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲು 2ಕೋಟಿ ರೂ.ಲಂಚ ಪಡೆದಿರುವ ಸಂಬಂಧ ಡಿಐಜಿ ರೂಪಾ ಪತ್ರ ಬರೆದಿದ್ದಾರೆ. ಈ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಬೇಕಿದೆ ಎಂದರು.ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಅನಗತ್ಯ ಕಿರುಕುಳ, ವರ್ಗಾವಣೆಯ ಬಳುವಳಿ ನೀಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಸೋನಿಯಾ ನಾರಂಗ್ ಸೇರಿ ಹಲವು ಅಧಿಕಾರಿಗಳು ಕಿರುಕುಳ ಅನುಭವಿಸಿದ್ದಾರೆ ಎಂದು ಟೀಕಿಸಿದರು.ದೇಶದಲ್ಲೆ ಕರ್ನಾಟಕದ ಪೊಲೀಸರಿಗೆ ಅಪಾರ ಗೌರವವಿತ್ತು. ಆದರೆ, ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರ ಬಹಿರಂಗ ಕಚ್ಚಾಟದಿಂದ ಅದು ಮಣ್ಣು ಪಾಲಾಗುತ್ತಿದೆ. ಕಾರಾಗೃಹದ ವೈದ್ಯರು ಅಲ್ಲಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಅವರಿಗೂ ಭದ್ರತೆ ಸಮಸ್ಯೆಯಿದೆ ಎಂದು ವಾಗ್ದಾಳಿ ನಡೆಸಿದರು.ಮಕ್ಕಳ ಚಿತ್ರಕಲೆ ನಿರ್ಲಕ್ಷ ಸಲ್ಲ: ಎಂ.ಎಸ್.ಮೂರ್ತಿಬೆಂಗಳೂರು, ಜು.15: ನಮ್ಮ ಸಮಾಜದಲ್ಲಿ ಮಕ್ಕಳ ಚಿತ್ರಕಲೆಯನ್ನು ನಿರ್ಲಕ್ಷಿಸುವ ಮೂಲಕ ಸೃಜನಾತ್ಮಕತೆಯನ್ನು ಮೊಳಕೆಯಲ್ಲಿಯೇ ಚಿವುಟುವ ಪ್ರಯತ್ನ ನಿರಂತರವಾಗಿದೆ ಎಂದು ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.ಶನಿವಾರ ಬಾಲ ಭವನ ಸೊಸೈಟಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ನಗರದ ಕಬ್ಬನ್ ಉದ್ಯಾನವನದಲ್ಲಿ 9ರಿಂದ 16ವರ್ಷದ ಸರಕಾರಿ ಶಾಲೆ ಹಾಗೂ ಸೌಲಭ್ಯ ವಂಚಿತ ಮಕ್ಕಳಿಗೆ ಆಯೋಜಿಸಿದ್ದ ‘ಕಂಸಾಳೆ-ಪಟ್ಟದ ಕುಣಿತ’, ‘ಜೇಡಿ ಮಣ್ಣಿನ ರಸಗ್ರಹಣ’ ಹಾಗೂ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಅಕ್ಷರ ಕಲಿಯುವುದಕ್ಕೂ ಮೊದಲೇ ಚಿತ್ರಕಲೆಯ ಮೂಲಕ ಶಿಕ್ಷಣವನ್ನು ಕಲಿಯಲು ಪ್ರಾರಂಭಿಸುತ್ತಾರೆ. ಆದರೆ, ಪೋಷಕರು ಮಕ್ಕಳು ಬಿಡಿಸುವ ಚಿತ್ರಕಲೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೆ, ಮಕ್ಕಳನ್ನು ನಿಂದಿಸಿ, ಚಿತ್ರಕಲೆಯನ್ನು ನಾಶ ಮಾಡುತ್ತಾರೆ. ಆ ಮೂಲಕ ಮಕ್ಕಳ ಸೃಜನಾತ್ಮಕತೆಯನ್ನು ಮೊಳಕೆಯಲ್ಲಿಯೇ ಮೊಟಕುಗೊಳಿಸುತ್ತಾರೆ ಎಂದು ಅವರು ವಿಷಾದಿಸಿದರು.ಇತ್ತೀಚಿನ ದಿನಗಳಲ್ಲಿ ಟಿವಿಗಳಲ್ಲಿ ಮಕ್ಕಳ ರಿಯಾಲಿಟಿ ಶೋಗಳ ಹಾವಳಿ ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಹೇಗಾದರು ರಿಯಾಲಿಟಿ ಶೋಗಳಲ್ಲಿ ಸೇರಿಸಲು ಹರಸಾಹಸ ಪಡುತ್ತಿದ್ದಾರೆ. ಇದರಿಂದ ಮ�







