ಮೂಡುಬಿದಿರೆಯಲ್ಲಿ ಸಂತೋಷ್ ಕುಮಾರ್ ಗುಲ್ವಾಡಿ ನೆನಪು

ಮೂಡುಬಿದಿರೆ,ಜು.15: ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವ ಮತ್ತು ಸೂಕ್ಷ್ಮತೆಗಳನ್ನು ಅರಿತುಕೊಳ್ಳುವುದು ಪತ್ರಕರ್ತರಲ್ಲಿರಬೇಕಾದ ಅಗತ್ಯತೆಗಳು. ಸಂತೋಷ್ ಕುಮಾರ್ ಗುಲ್ವಾಡಿಯವರು ಇಂತಹ ಶ್ರೇಷ್ಠ ಪತ್ರಕರ್ತರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವವರು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
ಅವರು ಶನಿವಾರ ಇಲ್ಲಿನ ಸಮಾಜ ಮಂದಿರದಲ್ಲಿ ಸಂತೋಷ್ ಕುಮಾರ್ ಗುಲ್ವಾಡಿ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮನೋಹರ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಗುಲ್ವಾಡಿಯವರ ಪತ್ನಿ ಸುದೇಷ್ಣಾ ಗುಲ್ವಾಡಿ, ಪುತ್ರಿ ಸಂಸ್ಕøತಿ ಗುಲ್ವಾಡಿ ಶೆಣೈ, ಪತ್ರಕರ್ತ ಆರ್.ಎನ್. ಪೂವಣಿ ಉಜಿರೆ ಅವರನ್ನು ಸಮ್ಮಾನಿಸಲಾಯಿತು. ಗುಲ್ವಾಡಿಯವರ ಕೊಂಕಣಿ ಕವನ ಸಂಕಲನದ ಆಯ್ದ ಗೀತೆಗಳ ಗಾಯನ ನಡೆಯಿತು.
ಪತ್ರಕರ್ತ ಬಿ. ಗಣಪತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ರೋಟರಿ ಅಧ್ಯಕ್ಷ ಶ್ರೀಕಾಂತ ಕಾಮತ್, ಉದ್ಯಮಿ ನಂದ ಕುಮಾರ್ ಆರ್. ಕುಡ್ವಾ, ರಮೇಶ್ ಶಾಂತಿ, ಗೌರಾ ಗೋವರ್ಧನ ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣ ಕುಮಾರ ಸ್ವಾಗತಿಸಿ, ಹರೀಶ್ ಆದೂರು ವಂದಿಸಿದರು. ಚಂದ್ರಕಾಂತ ಭಟ್ ಕಾರ್ಯಕ್ರಮ ನಿರ್ವಹಿಸಿದರು







