ಸಮಾಜದ ಗೌರವ ಪಡೆಯುವ ಗುರುಸ್ಥಾನ ದೊಡ್ಡದು: ಸೊರಕೆ

ಪೆರ್ಡೂರು, ಜು.15: ಸಮಾಜದಲ್ಲಿ ಎಲ್ಲರಿಂದಲೂ ಗೌರವ ಪಡೆಯುವ ಗುರು ಸ್ಥಾನ ದೊಡ್ಡದು ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.ಪೆರ್ಡೂರು ಪ್ರೌಢಶಾಲೆಯಲ್ಲಿ ಸಂಸ್ಕತ ಮತ್ತು ಹಿಂದಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಎಚ್.ಜನಾರ್ದನ ಆಚಾರ್ಯ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಸ್ಥಳಿಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಂ.ಆರ್.ಹೆಗ್ಡೆ ವಹಿಸಿದ್ದರು. ಉಪಾಧ್ಯಕ್ಷ ಶಾಂತಾರಾಮ ಸೂಡ, ದಾನಿ ಭದ್ರಾವತಿಯ ಸುಧಾಕರ ಶೆಟ್ಟಿ, ಮುಖ್ಯೋಪಾಧ್ಯಾಯ ಎಚ್.ಎಸ್.ಗಣೇಶ ಭಟ್, ರಕ್ಷಕ ಶಿಕ್ಷಕ ಸಂಘದ ದಿನೇಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ದೀಪಕ್ ಹೆಗ್ಡೆ ಉಪಸ್ಥಿತರಿದ್ದರು.
ಶಿಕ್ಷಕರಾದ ಗಣೇಶ ಭಟ್, ಸತೀಶ ಕುಮಾರ ಶೆಟ್ಟಿ, ಸ್ಟ್ಯಾನಿ ಮೆನೇಜಸ್ ಅಭಿನಂದನೆಯ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶಿಕ್ಷಕ ಜಯರಾಮ ಸ್ವಾಗತಿಸಿದರು. ಹೇಮಲತಾ ವಂದಿಸಿ ದರು. ಹಿರಿಯ ಶಿಕ್ಷಕ ಜಿ.ಪಿ.ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು.





