ಬಡವರಿಗೆ ಅಕ್ಕಿ ವಿತರಿಸಲು ಹಡಿಲು ಭೂಮಿಯಲ್ಲಿ ಕೃಷಿ

ಉಡುಪಿ, ಜು.15: ಕೆಥೋಲಿಕ್ ಸಭಾ ಕೊಳಲಗಿರಿ ಘಟಕದ ವತಿಯಿಂದ ಬಡಜನರಿಗೆ ಅಕ್ಕಿಯನ್ನು ನೀಡುವುದಕ್ಕಾಗಿ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯನ್ನು ಮಾಡುವ ಕಾರ್ಯಕ್ಕೆ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಇತ್ತೀಚೆಗೆ ಚಾಲನೆ ನೀಡಿದರು.
ಸ್ಥಳೀಯರಾದ ವಿಜಯದಾಸ್ ಶೆಟ್ಟಿ ಅವರ ಕೃಷಿ ಭೂಮಿ ಹಲವು ವರ್ಷ ಯಾವುದೇ ಕೃಷಿ ಚಟುವಟಿಕೆ ಮಾಡದೆ ಪಾಳು ಬಿದ್ದಿತ್ತು. ಕಳೆದ ವರ್ಷ ಕೆಥೋಲಿಕ್ ಸಭಾದ ಸದಸ್ಯರೆಲ್ಲ ಸೇರಿ ಈ ಭೂಮಿಯಲ್ಲಿ ಭತ್ತದ ಕೃಷಿಯನ್ನು ಮಾಡಿ ಸುಮಾರು 650 ಕೆ.ಜಿ. ಅಕ್ಕಿಯನ್ನು ಸ್ಥಳಿಯ ಬಡಜನರಿಗೆ ವಿತರಿಸಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳು ಜೋಸೆಫ್ ಕಲ್ಯಾಣಪುರ, ಕೆಥೋಲಿಕ್ ಸಭಾದ ಸ್ಟೀಫನ್ ಲೂವಿಸ್ ಬ್ರಹ್ಮಾವರ, ವಿನ್ಸೆಂಟ್ ಡಿಸೋಜ, ಫಾ.ಅನಿಲ್ ಪ್ರಕಾಶ ಉಪಸ್ಥಿತರಿದ್ದರು. ಬಳಿಕ ಕೆಥೋಲಿಕ್ ಸಭಾ ಸದಸ್ಯರಿಗೆ ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.
Next Story





