‘ಪರಮಾಣು’ ದೃಶ್ಯಗಳು ಲೀಕ್...!
ಭಾರತದ ಚೊಚ್ಚಲ ಅಣುಬಾಂಬ್ ಪರೀಕ್ಷೆಯ ರೋಚಕ ಕಥೆ ಹೇಳುವ ‘ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್’ನ ಮುಖ್ಯ ತಾರೆಯರಾದ ಜಾನ್ ಅಬ್ರಹಾಂ ಹಾಗೂ ಡಯಾನಾ ಪೆಂಟಿ ಅಭಿನಯದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಅವು ಚಿತ್ರಪ್ರೇಮಿಗಳಲ್ಲಿ ಭಾರೀ ಕ್ರೇಝ್ ಸೃಷ್ಟಿಸಿದೆ. ಮಿಲಿಟರಿ ಯೂನಿಫಾರಂನಲ್ಲಿ ಕಂಗೊಳಿಸಿರುವ ಜಾನ್ಅಬ್ರಹಾಂ ಆ್ಯಕ್ಷನ್ ಭರಿತ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ.
ಈಗಾಗಲೇ ಚಿತ್ರ ನಿರ್ಮಾಪಕರು ‘ಪರಮಾಣು..’ವಿನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. 1998ರಲ್ಲಿ ರಾಜಸ್ಥಾನದ ಪೋಖ್ರಾನ್ನಲ್ಲಿ ನಡೆಸಲಾದ ಅಣುಬಾಂಬ್ ಪರೀಕ್ಷೆಯ ಹಿನ್ನೆಲೆಯ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ಈ ಚಿತ್ರದ ನಾಯಕಿ ಡಯಾನಾ ಪೆಂಟಿ ಕೂಡಾ ಈ ಚಿತ್ರದಲ್ಲಿ ಸೇನಾಧಿಕಾರಿಣಿಯ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಇದು ತನ್ನ ವೃತ್ತಿ ಜೀವನದಲ್ಲಿ ದೊರೆತಿರುವ ಅತ್ಯಂತ ಸವಾಲುದಾಯಕವಾದ ಪಾತ್ರವಾಗಿದೆಯೆಂದು ಆಕೆ ಆನಂದತುಂದಿಲಳಾಗಿದ್ದಾಳೆ. ನಾಯಕ ಜಾನ್ ಅಬ್ರಹಾಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಪರಮಾಣು’ ತನ್ನ ಚಿತ್ರಬದುಕಿನ ಅಗ್ನಿಪರೀಕ್ಷೆ ಯಾಗಿದೆ ಎಂದಿದ್ದಾರೆ. ಬಾಲಿವುಡ್ನ ಇನ್ನೋರ್ವ ಪ್ರತಿಭಾವಂತ ನಟ ಬೊಮ್ಮನ್ ಇರಾನಿ ಕೂಡಾ ಈ ಚಿತ್ರದಲ್ಲಿದ್ದಾರೆ.