ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ 52 ವರ್ಷದ ವ್ಯಕ್ತಿ 1 ಗಂಟೆಯಲ್ಲಿ ತೆಗೆದ ಪುಶ್ ಅಪ್ ಗಳೆಷ್ಟು ಗೊತ್ತೇ?

ಆಸ್ಟ್ರೇಲಿಯಾ, ಜು.15: ಒಂದು ಗಂಟೆಯಲ್ಲಿ 2,500 ಪುಶ್ –ಅಪ್ ಗಳನ್ನು ತೆಗೆದ 52 ವರ್ಷದ ವ್ಯಕ್ತಿಯೊಬ್ಬ ನೂತನ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದ್ದಾರೆ.
2015ರಲ್ಲಿ ಆಸ್ಟ್ರೇಲಿಯಾದ ಕಾಲ್ಟನ್ ವಿಲಿಯಮ್ಸ್ 2,220 ಪುಶ್ ಅಪ್ ಗಳನ್ನು ತೆಗೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ಬಾರಿ 52 ವರ್ಷದ ಕಾಲ್ಟನ್ ಮತ್ತೊಮ್ಮೆ ನೂತನ ದಾಖಲೆ ನಿರ್ಮಿಸಿದ್ದಾರೆ.
ನಿಯಮಗಳ ಪ್ರಕಾರ ವಿಲಿಯಮ್ಸ್ ನೆಲದಲ್ಲಿ ಅಂಗೈಗಳನ್ನಿಟ್ಟು ತನ್ನ ದೇಹವನ್ನು ಕೆಳಕ್ಕೆ ಒತ್ತುವ ಸಂದರ್ಭ ಮೊಣಕೈಗಳು 90 ಡಿಗ್ರಿಯಲ್ಲಿರಬೇಕಾಗಿತ್ತು. ವಿಲಿಯಮ್ಸ್ ರ ಈ ವಿಶ್ವದಾಖಲೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
Next Story





