ಮುಗುರುಝಾ ವಿಂಬಲ್ಡನ್ ಚಾಂಪಿಯನ್

ಲಂಡನ್, ಜು.15: ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ನ ಫೈನಲ್ ನಲ್ಲಿ ರೋಚಕ ಜಯ ಗಳಿಸುವ ಮೂಲಕ ಸ್ಪೇನ್ ನ ಗಾರ್ಬೆನಾ ಮುಗುರುಝಾ ಮೊದಲ ಬಾರಿ ವಿಂಬಲ್ಡನ್ ಕಿರೀಟ ಧರಿಸಿದರು.
ಇಂದು ನಡೆದ ಫೈನಲ್ ನಲ್ಲಿ 23ರ ಹರೆಯದ ಮುಗುರುಝಾ ಅವರು ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ವಿರುದ್ಧ 7-6, 6-0 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ಬಾಚಿಕೊಂಡರು. 6ನೆ ವಿಂಬಲ್ಡನ್ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದ್ದ ವೀನಸ್ ಆಘಾತ ಅನುಭವಿಸಿದ್ದಾರೆ.
ಹದಿನಾಲ್ಕನೆ ಶ್ರೇಯಾಂಕದ ಮುಗುರುಝಾ ಎರಡನೆ ಗ್ರ್ಯಾನ್ ಸ್ಲಾಮ್ ಜಯಿಸಿದ್ದಾರೆ. 2016ರಲ್ಲಿ ಫ್ರೆಂಚ್ ಓಪನ್ ನಲ್ಲಿ ಸೆರೆನಾ ವಿಲಿಯಮ್ಸ್ ರನ್ನು ಮಣಿಸಿ ಮೊದಲ ಗ್ರ್ಯಾನ್ ಸ್ಲಾಮ್ ಜಯಿಸಿದ್ದರು.
Next Story





