ಕೇಬಲ್ ದೂರು ಕೋಶಕ್ಕೆ ದೂರು ನೀಡಿ: ಅಪರ ಜಿಲ್ಲಾಧಿಕಾರಿ

ಉಡುಪಿ, ಜು.15: ಕೇಬಲ್ ವಾಹಿನಿಗಳಲ್ಲಿ ಪ್ರಸಾರವಾಗುವ ಅನಪೇಕ್ಷಿತ ಕಾರ್ಯಕ್ರಮಗಳ ವಿರುದ್ಧ ಸಾರ್ವಜನಿಕರು ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಲ್ಲಿ ಪ್ರಾರಂಭಿಸಿರುವ ದೂರು ಕೋಶಕ್ಕೆ ದೂರು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಕೇಬಲ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಬಲ್ ವಾಹಿನಿಗಳಲ್ಲಿ ಪ್ರಸಾರವಾಗುವ ಅನಪೇಕ್ಷಿತವಾದ ಯಾವುದೇ ಕಾರ್ಯಕ್ರಮ ಸಾರ್ವಜನಿಕರಿಗೆ ಅತೃಪ್ತಿ ಉಂಟು ಮಾಡಿದರೆ ಅಥವಾ ಇದರಿಂದ ಯಾವುದೇ ಸಮುದಾಯಕ್ಕೆ ತೊಂದರೆಯಾದಲ್ಲಿ ಉಡುಪಿ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಲ್ಲಿ ಪ್ರಾರಂಭಿಸಿರುವ ಕೇಬಲ್ ದೂರು ಕೋಶ ದೂರವಾಣಿ ಸಂಖ್ಯೆ:0820-2524807ಗೆ ಮಾಹಿತಿ ಹಾಗೂ ಲಿಖಿತ ದೂರು ನೀಡಿದಲ್ಲಿ ಸಂಬಂದಪಟ್ಟ ಕೇಬಲ್ ನಿರ್ವಾಹಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
Next Story





