Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹತ್ಯೆಗಳ ತನಿಖೆಯನ್ನು ಎನ್‌ಐಎಗೆ ವಹಿಸಲು...

ಹತ್ಯೆಗಳ ತನಿಖೆಯನ್ನು ಎನ್‌ಐಎಗೆ ವಹಿಸಲು ಪಿಎಫ್‌ಐ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ15 July 2017 10:26 PM IST
share

ಮಂಗಳೂರು, ಜು.15: ಕರಾವಳಿಯಲ್ಲಿ ಗಲಭೆ, ಹಿಂಸಾಚಾರ, ಹತ್ಯೆ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಈ ಎಲ್ಲಾ ಘಟನೆಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಗೆ ವಹಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್ ಆಗ್ರಹಿಸಿದ್ದಾರೆ.

ಕಳೆದ ಒಂದು ದಶಕದಿಂದ ಕರಾವಳಿಯಲ್ಲಿ 20 ಮುಸ್ಲಿಮರು, 13 ಹಿಂದೂಗಳು ಸೇರಿದಂತೆ ಒಟ್ಟು 33 ಹತ್ಯೆ ಪ್ರಕರಣಗಳು ನಡೆದಿವೆ. ಇದರಲ್ಲಿ ಸಂಘಪರಿವಾರದ ವಿರುದ್ಧ ಮಾತನಾಡುವ ಮತ್ತು ಅದರ ಅಜೆಂಡಾವನ್ನು ಬಹಿರಂಗವಾಗಿ ತೆರೆದಿಡುತ್ತಿದ್ದವರನ್ನು ಮುಖ್ಯವಾಗಿ ಗುರಿಪಡಿಸಲಾಗಿದೆ. ಮೌಲಾನಾ ಅಬ್ದುಲ್ ಗಫೂರ್ ಮದನಿ, ಮಾನವ ಹಕ್ಕು ಹೋರಾಟಗಾರ ನ್ಯಾಯವಾದಿ ನೌಶಾದ್ ಖಾಸಿಂಜಿ, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ, ಜನಪ್ರತಿನಿಧಿಗಳಾಗಿದ್ದ ಎಂ.ಡಿ.ಜಬ್ಬಾರ್, ಅಬ್ದುಲ್ ರಹ್ಮಾನ್ ಸಂಗಬೆಟ್ಟು ಹಾಗೂ ಜಲೀಲ್ ಕರೋಪಾಡಿ, ಅರ್ಚಕ ಕೃಷ್ಣಯ್ಯ ಪಾಟಾಳಿ, ಡಿವೈಎಫ್‌ಐ ಕಾರ್ಯಕರ್ತ ಭಾಸ್ಕರ್ ಕುಂಬ್ಳೆ ಮತ್ತು ಶ್ರೀನಿವಾಸ ಬಜಾಲ್ ಮೊದಲಾದವರು ಸಂಘಪರಿವಾರದಿಂದ ಹತ್ಯೆಗೀಡಾದವರಲ್ಲಿ ಪ್ರಮುಖರಾಗಿದ್ದಾರೆ ಎಂದವರು ಹೇಳಿದ್ದಾರೆ.

ಇದರಲ್ಲಿ ಹಿಂದುತ್ವ ಭಯೋತ್ಪಾದಕ ಸಂಘಟನೆಯಾದ ಅಭಿನವ್ ಭಾರತ್, ಸನಾತನ ಸಂಸ್ಥೆಗೆ ಸಂಬಂಧ ಹೊಂದಿದೆಯೇ ಎಂದು ಬಲವಾಗಿ ಸಂಶಯಿಸಬೇಕಾಗುತ್ತದೆ. ವಿಚಾರವಾದಿಗಳಾದ ದಾಭೋಲ್ಕರ್, ಪನ್ಸಾರೆ, ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆಯಲ್ಲಿ ಈ ಸಂಘಟನೆಗಳ ನಂಟನ್ನು ತನಿಖಾ ದಳವು ಬಲವಾಗಿ ಶಂಕಿಸಿತ್ತು. ಪನ್ಸಾರೆ ಹತ್ಯೆ ಆರೋಪಿಗಳೂ ಕೂಡ ಸನಾತನ ಸಂಸ್ಥೆಯ ಕಾರ್ಯಕರ್ತರು ಎಂಬುದು ಈಗಾಗಲೇ ತನಿಖೆಯಿಂದ ಬರಂಗಪಟ್ಟಿದೆ. ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪುತ್ತೂರಿನ ಜಯಪ್ರಕಾಶ್ ಎಂಬಾತನ ಮಾಹಿತಿಗೆ ಎನ್‌ಐಎ ನಗದು ಬಹುಮಾನವನ್ನೂ ಘೋಷಿಸಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ನಾಯಕರು ಮತ್ತು ಸಂಘಪರಿವಾರದ ವಿರುದ್ಧ ಧ್ವನಿ ಎತ್ತುವವರನ್ನು ಗುರಿಯಾಗಿಸಿ ಕರಾವಳಿಯಲ್ಲಿ ಹತ್ಯೆ ನಡೆಯುತ್ತಿದ್ದು, ಈ ಹತ್ಯಾ ಪ್ರಕರಣಗಳ ಹಿಂದೆ ದೇಶದ ವಿವಿಧಡೆ ಬಾಂಬ್ ಸ್ಫೋಟದಂತಹ ಭಯೋತ್ಪಾದನಾ ಕತ್ಯಗಳಲ್ಲಿ ಭಾಗಿಯಾಗಿರುವ ಆರೆಸ್ಸೆಸ್, ಅಭಿನವ್ ಭಾರತ್ ಹಾಗೂ ಸನಾತನ ಸಂಸ್ಥೆಯ ಕೈವಾಡವಿರುವ ಬಗ್ಗೆ ಬಲವಾದ ಶಂಕೆ ಮೂಡುತ್ತಿದೆ ಎಂದವರು ತಿಳಿಸಿದ್ದಾರೆ.
 
 ಕಳೆದೆರಡು ದಶಕಗಳಲ್ಲಿ ದ.ಕ.ಜಿಲ್ಲೆ ಅದರಲ್ಲೂ ಬೆಳ್ತಂಗಡಿ ತಾಲೂಕಿನಲ್ಲಿ ಮಹಿಳೆಯರ ಮೇಲಿನ ಹಿಂಸಾ ಪ್ರಕರಣಗಳು ನಾಗರಿಕ ಸಮಾಜ ಬೆಚ್ಚಿ ಬೀಳುವಷ್ಟು ಮೀತಿಮೀರಿವೆ. 2016ರಲ್ಲಿ ವಿ.ಎಸ್.ಉಗ್ರಪ್ಪನವರ ನೇತೃತ್ವದಲ್ಲಿ ರಚಿಸಲಾದ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿಯು ಕೇವಲ ಬೆಳ್ತಂಗಡಿಯಲ್ಲಿಯೇ 500 ಅಸಹಜ ಸಾವು ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ ಬಹುಪಾಲು ಮಹಿಳೆಯರೇ ಆಗಿದ್ದಾರೆ ಎಂದು ಕಳೆದ ವರ್ಷದ ಪ್ರಾರಂಭದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾಹಿತಿ ನೀಡಿತ್ತು. ಅಲ್ಲದೆ, ಈ ಪ್ರಕರಣಗಳ ತನಿಖೆಗಾಗಿ ವಿಶೇಷ ತಂಡವನ್ನು ಕಳುಹಿಸಬೇಕೆಂದು ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿತ್ತು. ಜನರನ್ನು ಆತಂಕಕ್ಕೆ ದೂಡುತ್ತಿರುವ ಈ ಅಸಹಜ ಸಾವಿನ ಪ್ರಕರಣಗಳನ್ನು ಎನ್‌ಐಎ ತನಿಖೆಗೊಳಪಡಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. 70ರ ದಶಕದಲ್ಲಿ ಜನಸಂಘವು ಕಾಂಗ್ರೆಸ್ ನೇತಾರ ಕೆ.ಎಂ.ಇಸ್ಮಾಯೀಲ್ ಕಲ್ಲಡ್ಕರನ್ನು ಸಂಚಿನಿಂದ ಕೊಲ್ಲುವ ಮೂಲಕ ಕರಾವಳಿಯಲ್ಲಿ ಹತ್ಯಾ ರಾಜಕೀಯಕ್ಕೆ ಮುನ್ನುಡಿ ಬರೆಯಿತು.

ಕಳೆದ ಎರಡೂವರೆ ದಶಕಗಳಲ್ಲಿ ರಾಜಕೀಯ ಕ್ತಿಯನ್ನು ಪಡೆದುಕೊಳ್ಳಲು ಸಂಘಪರಿವಾರವು ದಕ್ಷಿಣ ಕನ್ನಡದ ಶೂದ್ರ ಸಮುದಾಯದ ಯುವಕರನ್ನು ಬಳಸಿಕೊಂಡು ಹಲವು ಕೋಮುಗಲಭೆಗಳನ್ನು ಸೃಷ್ಟಿಸಿ ಮುಸ್ಲಿಮ್ ಸಮುದಾಯದ ಜೀವ, ಸೊತ್ತು, ಮಾನ ಹಾನಿಗೆ ಕಾರಣವಾಗಿದೆ. ಆದ್ದರಿಂದ ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ರಾಜಕೀಯವನ್ನು ಕೊನೆಗಾಣಿಸಲು ಈ ಮೇಲೆ ತಿಳಿಸಿದ ಎಲ್ಲಾ ಹತ್ಯೆ ಪ್ರಕರಣಗಳನ್ನೂ ಎನ್‌ಐಎ ತನಿಖೆಗೆ ವಸಬೇಕೆಂದು ನವಾಝ್ ಉಳ್ಳಾಲ್ ಒತ್ತಾಯಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X