ಪುತ್ತೂರು: 50 ಲಕ್ಷ ಮುಖಬೆಲೆಯ ಹಳೆಯ ನೋಟುಗಳ ಸಾಗಾಟ; ಮೂವರ ಬಂಧನ

ಮಂಗಳೂರು, ಜು.15: ದಾಖಲೆರಹಿತ 50 ಲಕ್ಷ ಮುಖಬೆಲೆಯ ಹಳೆಯ ನೋಟುಗಳನ್ನು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ನಿಸಾರ್, ಮುಹಮ್ಮದ್ ಸಿರಾಜ್ ಮತ್ತು ಅಬ್ದುಲ್ ಹಾರಿಸ್ ಎಂದು ಗುರುತಿಸಲಾಗಿದೆ.
ಪುತ್ತೂರು ನಗರ ಠಾಣಾ ಪೊಲೀಸ್ ತಪಾಸಣೆ ವೇಳೆ ಬೈಪಾಸ್ ಉರ್ಲಾಂಡಿ ಬಳಿ ಕಾರನ್ನು ನಿಲ್ಲಿಸಲಾಗಿದೆ. ಮಡಿಕೇರಿ ಕಡೆಯಿಂದಮಾಣಿ ಕಡೆಗೆ ಕಾರಿನಲ್ಲಿ ಈ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಹೊಸ ನೋಟುಗಳೊಂದಿಗೆ ಬದಲಾವಣೆಗಾಗಿ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





