ಹೊನೊಲುಲು: ಗಗನಚುಂಬಿಗೆ ಬೆಂಕಿ; 3 ಸಾವು

ಹೊನೊಲುಲು (ಅಮೆರಿಕ), ಜು. 15: ಅಮೆರಿಕದ ಹವಾಯಿ ರಾಜ್ಯದ ರಾಜಧಾನಿ ಹೊನೊಲುಲುವಿನಲ್ಲಿ 36 ಮಹಡಿಯ ಕಟ್ಟಡವೊಂದಕ್ಕೆ ಶುಕ್ರವಾರ ಬೆಂಕಿ ಬಿದ್ದಿದ್ದು ಮೂವರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ನಗರದ ಅಧಿಕಾರಿಗಳು ಹೇಳಿದ್ದಾರೆ.
‘ಮಾರ್ಕೊ ಪೋಲೊ’ ಗಗನಚುಂಬಿಯ ಬೆಂಕಿಯನ್ನು ಸ್ಥಳೀಯ ಸಮಯ ಸಂಜೆ ಸುಮಾರು 6:30ಕ್ಕೆ ನಿಯಂತ್ರಣಕ್ಕೆ ತರಲಾಯಿತು ಎಂದು ಹೊನೊಲುಲು ಮೇಯರ್ ಕಿರ್ಕ್ ಕಾಲ್ಡ್‌ವೆಲ್ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.
ಬೆಂಕಿ ನಿಯಂತ್ರಣಕ್ಕೆ ಬರುವ ಮುನ್ನ ನಾಲ್ಕು ಗಂಟೆಗಳ ಕಾಲ ಮೂರು ಮಹಡಿಗಳಲ್ಲಿ ದಾಂಧಲೆ ನಡೆಸಿದೆ.
ನೂರಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಸಮೀಪದ ಕಟ್ಟಡಗಳ ಬಾಲ್ಕನಿಗಳಿಂದ ನೀರು ಹಾರಿಸಿ ಬೆಂಕಿ ನಂದಿಸಲು ಹೋರಾಡಿದರು. ಹೆಲಿಕಾಪ್ಟರೊಂದು ಮೇಲಿನಿಂದ ಗಿರಕಿ ಹೊಡೆಯುತ್ತಿತ್ತು.
Next Story





