ಬ್ರಿಟನ್‍ನಲ್ಲಿ ಆ್ಯಸಿಡ್ ಮಾರಾಟದ ವಿರುದ್ಧ ಹೋರಾಟ ಆರಂಭಿಸಿದ ರೇಶಂ ಖಾನ್

ಲಂಡನ್,ಜು. 16: ಆ್ಯಸಿಡ್ ದಾಳಿಯ ವಿರುದ್ಧ ಬಲವಾದ ಕ್ರಮ ಜರಗಿಸಲು ಸರಕಾರ ತಯಾರಾಗಬೇಕೆಂದು ಆ್ಯಸಿಡ್ ದಾಳಿಗೊಳಗಾದ ಯುವತಿ ರೇಶಂ ಖಾನ್ ವಿನಂತಿಸಿದ್ದಾರೆ. ಇದಕ್ಕಾಗಿ ಸರಕಾರ ತುರ್ತಾಗಿ ಕಾನೂನು ಜಾರಿಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಪೂರ್ವ ಲಂಡನ್‍ನಲ್ಲಿ ಆ್ಯಸಿಡ್ ದಾಳಿಗೊಳಗಾಗಿದ್ದ ರೇಶಂ ಖಾನ್‍ರಿಗೆ ಗಂಭೀರ ಗಾಯಗಳಾಗಿತ್ತು. ಆ್ಯಸಿಡ್ ಬ್ರಿಟನ್‍ನಾದ್ಯಂತ ಕಡಿಮೆ ಬೆಲೆಗೆ ಲಭಿಸುತ್ತದೆ. ಅದಕ್ಕೆ ಯಾವ ಮಾನದಂಡವೂ ಇಲ್ಲ ಆ್ಯಸಿಡ್ ದಾಳಿ ಮಾಡುವ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಲು ಸರಕಾರ ಸಿದ್ಧವಾಗಬೇಕು ಎಂದು ರೇಶಂ ಖಾನ್ ಸರಕಾರವನ್ನುಆಗ್ರಹಿಸಿದ್ದಾರೆ. ಅವರ ಮನವಿ ಪತ್ರಕ್ಕೆ ನಾಲ್ಕು ಲಕ್ಷ ಮಂದಿ ಸಹಿಹಾಕಿದ್ದಾರೆ.
ಖಾನ್ ಮತ್ತು ಅವರ ಸಹೋದರ ಜಮೀಲ್ ಮುಕ್ತಾರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಾನ್ ಟಾಂಲಿಲ್ ಎನ್ನುವ ವ್ಯಕ್ತಿ ಆ್ಯಸಿಡ್ ಎರಚಿದ್ದ. ಪೊಲೀಸರು ಆತನನ್ನು ಬಂಧಿಸಿದ್ದು ಘಟನೆಯನ್ನು ಪೊಲೀಸರು ಜನಾಂಗೀಯ ದಾಳಿ ಎಂದು ತಿಳಿಸಿದ್ದಾರೆ. ಅದರೆ ಮುಸ್ಲಿಮರು ಎನ್ನುವ ಕಾರಣಕ್ಕೆ ಆ್ಯಸಿಡ್ ದಾಳಿ ನಡೆಸಲಾಗಿದೆ ಎಂದು ರೇಶಂ ಖಾನ್ ಸಹೋದರ ಜಮೀಲ್ ಮುಕ್ತಾರ್ ಹೇಳಿದ್ದಾರೆ.





