ರಾಜ್ಯ ಮಟ್ಟದ ಪುರಸ್ಕಾರ ಪರೀಕ್ಷಾ ಶಿಬಿರ

ಉಡುಪಿ, ಜು.16: ರಾಜ್ಯ ಮಟ್ಟದ ಸ್ಕೌಟ್ಸ್ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವು ಪ್ರಗತಿ ನಗರದ ಡಾ.ವಿ.ಎಸ್.ಆಚಾರ್ಯ ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಇತ್ತೀಚಿಗೆ ನಡೆಯಿತು.
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯದ ಉಪಾಧ್ಯಕ್ಷೆ ಶಾಂತಾ ವಿ.ಆಚಾರ್ಯ ಮಾತನಾಡಿ, ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸದಾ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸ್ಕೌಟ್ ಆಯುಕ್ತ ಏಡ್ವಿನ್ ಆಳ್ವ, ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಶೇಖರ ಪೂಜಾರಿ ಸ್ವಾಗತಿಸಿದರು. ಶಿಬಿರ ನಾಯಕ ರಾಮ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಸನ, ಕೊಡಗು, ಕಾರವಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಗಳಿಂದ ಸುಮಾರು 240 ಸ್ಕೌಟ್ಸ್‌ಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಸ್ಕೌಟ್ಸ್ ಮಕ್ಕಳಿಗೆ ಟೆಂಟು ವಾಸ ನಿಡಲಾಗಿತ್ತು. 40 ಸ್ಕೌಟ್ ಮಾಸ್ಟರ್ಸ್ ಪಾಲ್ಗೊಂಡಿದ್ದರು. ನಿತಿನ್ ಅಮೀನ್ ಕಾರ್ಯಕ್ರಮ ಸಂಘಟಿಸಿದರು.





