ಕ್ಷತ್ರಿಯ ಜನಾಂಗದ ಅಭಿವೃದ್ಧಿಗೆ ಸರಕಾರ ಮುಂದಾಗಲಿ: ಬಿ.ಜೆ.ಪುಟ್ಟಸ್ವಾಮಿ
ಬೆಂಗಳೂರು, ಜು.16: ರಾಜ್ಯ ಸರಕಾರ ಕ್ಷತ್ರಿಯ ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ. ರವಿವಾರ ತುಮಕೂರು ರಸ್ತೆಯ ನೀಲಕಂಠ ಕನ್ವೆನ್‌ಷನ್ ಸೆಂಟರ್‌ನಲ್ಲಿ ವಿಶ್ವ ಕ್ಷತ್ರಿಯ ಮಹಾಸಂಸ್ಥಾನ ಆಯೋಜಿಸಿದ್ದ ಕ್ಷತ್ರಿಯ ಆಹಾರ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ಷತ್ರಿಯ ಜನಾಂಗದವರು ಈ ಮೊದಲು ತೋಟಗಾರಿಕೆ ಹಾಗೂ ಉದ್ಯಾನವನದ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಹಾಗೂ ಉದ್ಯಾನವನದ ಕೆಲಸ ಕಡಿಮೆಯಾಗುತ್ತಿರುವುದರಿಂದ ನಿರುದ್ಯೋಗ ಹೆಚ್ಚಾಗುತ್ತಿದೆ. ಹೀಗಾಗಿ, ರಾಜ್ಯ ಸರಕಾರ ನಿರುದ್ಯೋಗ ಹಾಗೂ ಇತರೆ ಸಮಸ್ಯೆಗಳನ್ನು ಹೋಗಲಾಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, ಕ್ಷತ್ರಿಯ ಜನಾಂಗದ ಯುವಕರು ಐಎಎಸ್, ಐಎಫ್‌ಎಸ್ ಹಾಗೂ ಕೆಎಎಸ್ ಪರೀಕ್ಷೆಗಳನ್ನು ಪಾಸಾಗುವ ಮೂಲಕ ಕ್ಷತ್ರಿಯ ಜನಾಂಗವನ್ನು ಬಲಿಷ್ಠಗೊಳಿಸಬೇಕೆಂದು ಆಶಿಸಿದರು.





