ಸರಕಾರಿ ಶಾಲೆಯ ರಾಷ್ಟ್ರಧ್ವಜದ ಕಂಬದಲ್ಲಿ ಬಿಜೆಪಿ ಧ್ವಜ ಹಾರಾಟ: ಗ್ರಾಮಸ್ಥರಿಂದ ಆಕ್ರೋಶ
ವಿಜಯಪುರ, ಜು.16: ಸರಕಾರಿ ಶಾಲೆಯ ರಾಷ್ಟ್ರಧ್ವಜದ ಕಂಬದಲ್ಲಿ ಬಿಜೆಪಿ ಧ್ವಜ ಹಾರಾಟ ನಡೆಸಿರುವ ವಿವಾದತ್ಮಾಕ ಘಟನೆ ಬಸವನ ಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಗಣಿ ಗ್ರಾಮದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಭಾಗಿಯಾದ ಪಕ್ಷದ ಕಾರ್ಯಕರ್ತರ ಮಂಡಲ ಕಾರ್ಯಕ್ರಮದ ವೇಳೆ ಶಾಲೆಯ ರಾಷ್ಟ್ರಧ್ವಜ ಕಂಬದಲ್ಲಿ ಬಿಜೆಪಿಗರು ಪಕ್ಷದ ಬಾವುಟ ಹಾರಿಸಿರುವ ಆರೋಪ ಕೇಳಿ ಬಂದಿದೆ.
ಈ ಅವಾಂತರಕ್ಕೆ ಗಣಿ ಗ್ರಾ.ಪಂ. ಅಧ್ಯಕ್ಷೆ ಶೀಲಾಬಾಯಿ ಪ್ರಶಾಂತ ಪವಾರ ಅವರೇ ಕಾರಣ ಎಂಬ ಮಾತು ಕೇಳಿ ಬಂದಿದ್ದು, ಬಿಜೆಪಿಗರ ವರ್ತನೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





