ಗೋವಿನಿಂದ ಪ್ರಯೋಜನಗಳ ಬಗ್ಗೆ ಸಂಶೋಧನೆಗೆ ಆರೆಸ್ಸೆಸ್,ವಿಹಿಂಪ ಸದಸ್ಯರನ್ನೊಳಗೊಂಡ ಸಮಿತಿ ರಚನೆ

ಹೊಸದಿಲ್ಲಿ,ಜು.16: ಗೋಮೂತ್ರ ಸೇರಿದಂತೆ ಗೋ ಉತ್ಪನ್ನಗಳು ಮತ್ತು ಅವುಗಳಿಂದ ಲಾಭಗಳ ಕುರಿತು ವೈಜ್ಞಾನಿಕವಾಗಿ ಪ್ರಮಾಣೀಕರಿಸಲ್ಪಟ್ಟ ಸಂಶೋಧನೆಗಳನ್ನು ನಡೆಸಲು ಆರೆಸ್ಸೆಸ್ ಮತ್ತು ವಿಹಿಂಪ ಜೊತೆ ಗುರುತಿಸಿಕೊಂಡಿರುವ ಮೂವರು ಸೇರಿದಂತೆ 19 ಸದಸ್ಯರ ಸಮಿತಿಯೊಂದನ್ನು ಸರಕಾರವು ರಚಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ ನೇತೃತ್ವದ ರಾಷ್ಟ್ರೀಯ ಚಾಲನಾ ಸಮಿತಿಯು ಪೌಷ್ಟಿಕಾಂಶ,ಆರೋಗ್ಯ ಮತ್ತು ಕೃಷಿ ವಲಯಗಳಲ್ಲಿ ಆಕಳ ಸೆಗಣಿ ಮತ್ತು ಮೂತ್ರ,ಹಾಲು,ಮೊಸರು ಮತ್ತು ತುಪ್ಪ ಇವುಗಳ ಮಿಶ್ರಣವಾದ ಪಂಚಗವ್ಯದ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲು ನೆರವಾಗುವ ಯೋಜನೆಗಳನ್ನು ಆಯ್ಕೆ ಮಾಡಲಿದೆ.
ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಕಾರ್ಯದರ್ಶಿಗಳು, ಐಐಟಿ-ದಿಲ್ಲಿಯ ವಿಜ್ಞಾನಿಗಳು ಹಾಗೂ ಸಂಘ ಪರಿವಾರಕ್ಕೆ ಸೇರಿದ ವಿಜ್ಞಾನ ಭಾರತಿ ಮತ್ತು ಗೋ ವಿಜ್ಞಾನ ಅನುಸಂಧಾನ ಕೇಂದ್ರದ ಮೂವರು ಸದಸ್ಯರನ್ನು ಈ ಸಮಿತಿಯು ಒಳಗೊಂಡಿದೆ.
Next Story





